alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡನೇ ಮಗುವಿಗೆ ಸಿದ್ಧತೆ ನಡೆಸ್ತಿದೆ ಕರೀನಾ-ಸೈಫ್ ಜೋಡಿ

ಬಾಲಿವುಡ್ ನ ಪ್ರಸಿದ್ಧ ಜೋಡಿಗಳಲ್ಲೊಂದು ಕರೀನಾ-ಸೈಫ್ ದಂಪತಿ. ಕರೀನಾ-ಸೈಫ್ ಗೆ ಈಗಾಗಲೇ ಮುದ್ದಾದ ಗಂಡು ಮಗುವೊಂದಿದೆ. ತೈಮೂರ್ ದೊಡ್ಡವನಾಗ್ತಿದ್ದು, ಕರೀನಾ ಇನ್ನೊಂದು ಮಗುವಿನ ಪ್ಲಾನ್ ಮಾಡ್ತಿದ್ದಾಳೆ. ಈ ವಿಷ್ಯವನ್ನು ಖುದ್ದು ಕರೀನಾ ಕಪೂರ್ ಖಾನ್ ಹೇಳಿದ್ದಾಳೆ.

ಕರೀನಾ ಇತ್ತೀಚಿಗೆ ಸ್ನೇಹಿತೆ ಅಮೃತಾ ಅರೋರಾ ಜೊತೆ ಕೋಮಲ್ ನಹಾತಾ ಶೋ Starry Nights 2.Oh! ಕಾರ್ಯಕ್ರಮಕ್ಕೆ ಬಂದಿದ್ದಳು. ಈ ವೇಳೆ ನಾನು ಹಾಗೂ ಸೈಫ್ ಎರಡನೇ ಮಗುವಿನ ಪ್ಲಾನ್ ಮಾಡ್ತಿದ್ದೇವೆ. ಆದ್ರೆ ಎರಡು ವರ್ಷಗಳ ನಂತ್ರವೆಂದು ಕರೀನಾ ಹೇಳಿದ್ದಾಳೆ.

ಡಿಸೆಂಬರ್ 20,2016 ರಂದು ತೈಮೂರ್ ಜನಿಸಿದ್ದಾನೆ. ಕರೀನಾ ಮೀಡಿಯಾ ಮುಂದೆ ಮಗನನ್ನು ಮರೆಮಾಚಿಲ್ಲ. ತೈಮೂರ್ ಎಲ್ಲಿ ಹೋದ್ರೂ ಸುದ್ದಿಯಾಗ್ತಾನೆ. ತೈಮೂರ್ ನಂತ್ರ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸಿನಿಮಾಕ್ಕೆ ಹೆಚ್ಚು ಸಮಯ ಸಿಗ್ತಿಲ್ಲ. ವರ್ಷಕ್ಕೆ ಒಂದು ಚಿತ್ರ ಮಾಡ್ತೇನೆಂದು ಕರೀನಾ ಹೇಳಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...