alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ‘ವಿಲನ್’ ಆಗಲಿದ್ದಾರೆ ಈ ಹೀರೋ

ದರ್ಶನ್ ಅಭಿನಯದ 50 ನೇ ಚಿತ್ರ ‘ಕುರುಕ್ಷೇತ್ರ’ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಇದೇ ವೇಳೆ ದರ್ಶನ್ ಹೊಸ ಚಿತ್ರವೂ ಸೆಟ್ಟೇರಿದ್ದು, ಅವರ ಹುಟ್ಟುಹಬ್ಬಕ್ಕೆ ಟೈಟಲ್ ಲಾಂಚ್ ಆಗಲಿದೆ. ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಹೀರೋ ವಿಲನ್ ಆಗಿ ದರ್ಶನ್ ಅವರೊಂದಿಗೆ ಫೈಟ್ ಮಾಡಲಿದ್ದಾರೆ.

ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಚಿತ್ರದ ‘ಡಾಲಿ’ ಪಾತ್ರದ ಮೂಲಕ ಭಾರೀ ಕುತೂಹಲ, ಭರವಸೆ ಮೂಡಿಸಿರುವ ಧನಂಜಯ ಮತ್ತೊಮ್ಮೆ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

ನಾಯಕನಾಗಿ ಜನಪ್ರಿಯವಾಗಿದ್ದಾಗಲೇ ಧನಂಜಯ ‘ಟಗರು’ ಚಿತ್ರದಲ್ಲಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲಾ ಪಾತ್ರಕ್ಕೂ ಸೈ ಎಂದಿದ್ದಾರೆ. ‘ಡಾಲಿ’ ಪಾತ್ರ ಗಮನ ಸೆಳೆದಿರುವಂತೆಯೇ ದರ್ಶನ್ ಅವರ ಚಿತ್ರದಲ್ಲಿಯೂ ವಿಲನ್ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ದರ್ಶನ್ ಅವರ ಚಿತ್ರದಲ್ಲಿ ಧನಂಜಯ ವಿಲನ್ ಪಾತ್ರ ನಿರ್ವಹಿಸಲು ಒಪ್ಪಿದ್ದು, ಶೀಘ್ರವೇ ಅಧಿಕೃತ ಮಾಹಿತಿ ಹೊರ ಬೀಳುವ ನಿರೀಕ್ಷೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...