alex Certify
ಕನ್ನಡ ದುನಿಯಾ       Mobile App
       

Kannada Duniya

‘ಸಾಹೋ’ ಬಳಿಕ ಲವರ್ ಬಾಯ್ ಆಗಲಿದ್ದಾರೆ ಪ್ರಭಾಸ್

ಟಾಲಿವುಡ್ ಸ್ಟಾರ್ ಪ್ರಭಾಸ್ ಈಗ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟ. ಬಾಹುಬಲಿ ಯಶಸ್ಸಿನ ನಂತರ ಪ್ರಭಾಸ್ ಗೆ ಬಹುಬೇಡಿಕೆ ಬಂದಿದೆ. ಪ್ರಭಾಸ್ ರನ್ನು ಹಾಕಿಕೊಂಡು ಸಿನೆಮಾ ಮಾಡಲು ನಿರ್ದೇಶಕರು ತುದಿಗಾಲಲ್ಲಿ ನಿಂತಿದ್ದಾರೆ. ಸದ್ಯ ‘ಸಾಹೋ’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರೋ ಪ್ರಭಾಸ್, ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ.

ದಕ್ಷಿಣದ ಪ್ರಾಜೆಕ್ಟ್ ಗಳೆಲ್ಲ ಮುಗಿದ ಮೇಲೆ ಈ ಬಾಲಿವುಡ್ ಚಿತ್ರದಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಇದೊಂದು ಪಕ್ಕಾ ಲವ್ ಸ್ಟೋರಿ. ಈಗಾಗ್ಲೇ ಒಪ್ಪಿಕೊಂಡಿರೋ ಪ್ರಾಜೆಕ್ಟ್ ಮುಂದಿನ ವರ್ಷ ಜೂನ್-ಜುಲೈ ವೇಳೆಗೆಲ್ಲಾ ಪೂರ್ಣಗೊಳ್ಳಲಿದೆ. ಅದಾದ್ಮೇಲೆ ಬಾಲಿವುಡ್ ಸಿನೆಮಾದಲ್ಲಿ ಅಭಿನಯಿಸೋದಾಗಿ ಪ್ರಭಾಸ್ ತಿಳಿಸಿದ್ದಾರೆ.

ಸದ್ಯ ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ‘ಸಾಹೋ’ ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಸುಜೀತ್ ನಿರ್ದೇಶನದ ಈ ಚಿತ್ರ 200 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...