alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳನ್ನು ಕಾಣುವ ಹಂಬಲದಲ್ಲಿ ಅನಾಥಳಂತೆ ಪ್ರಾಣಬಿಟ್ಟ ಹಿರಿಯ ನಟಿ

ಬಾಲಿವುಡ್ ನ ಹಿರಿಯ ನಟಿ, ‘ಪಾಕೀಜಾ’ ಚಿತ್ರದ ಖ್ಯಾತಿಯ ಗೀತಾ ಕಪೂರ್ ಸಾವನ್ನಪ್ಪಿದ್ದಾರೆ. ಓರ್ವ ಪುತ್ರ ಹಾಗೂ ಪುತ್ರಿ ಇದ್ದರೂ ಕಡೆಗಾಲದಲ್ಲಿ ವೃದ್ಧಾಶ್ರಮದಲ್ಲಿದ್ದ ಗೀತಾ ಕಪೂರ್, ಮಕ್ಕಳನ್ನು ಕಾಣುವ ಹಂಬಲದಲ್ಲೇ ಇಹಲೋಕ ತ್ಯಜಿಸಿದ್ದಾರೆ.

‘ಪಾಕೀಜಾ’, ‘ರಜಿಯಾ ಸುಲ್ತಾನ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಗೀತಾ ಕಪೂರ್ ರನ್ನ ಕಳೆದ ವರ್ಷ ಪುತ್ರನೇ ಮನೆಯಿಂದ ಹೊರ ಹಾಕಿದ್ದಲ್ಲದೆ, ಆಸ್ಪತ್ರೆಗೆ ಸೇರಿಸಿ ಬಳಿಕ ಬಿಲ್ ಕಟ್ಟದೆ ನಾಪತ್ತೆಯಾಗಿದ್ದ.

ಈ ವಿಚಾರ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಬಾಲಿವುಡ್ ನಿರ್ಮಾಪಕ ಅಶೋಕ್ ಪಂಡಿತ್ ಹಾಗೂ ‘ರೇಸ್ 3’ ಚಿತ್ರದ ನಿರ್ಮಾಪಕ ರಮೇಶ್ ತೌರಾನಿ ಆಸ್ಪತ್ರೆಯ ಬಿಲ್ ಕಟ್ಟಿ ಗೀತಾ ಕಪೂರ್ ರನ್ನು ವೃದ್ಧಾಶ್ರಮವೊಂದಕ್ಕೆ ಸೇರಿಸಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಗೀತಾ ಕಪೂರ್, ಕಳೆದ ಕೆಲ ದಿನಗಳಿಂದ ತಮ್ಮ ಮಕ್ಕಳನ್ನು ನೋಡುವ ಬಯಕೆ ವ್ಯಕ್ತಪಡಿಸುತ್ತಿದ್ದರು. ಆದರೆ ಯಾರೊಬ್ಬರೂ ಬರಲಿಲ್ಲವೆನ್ನಲಾಗಿದ್ದು, ಇದೇ ಕೊರಗಿನಲ್ಲಿ ಆಕೆ ಸಾವನ್ನಪ್ಪಿದ್ದಾರೆ. ಅಂತಿಮ ಸಂಸ್ಕಾರ ನೆರವೇರಿಸಲೂ ಮಕ್ಕಳು ಬಾರದಿದ್ದಲ್ಲಿ ತಾವೇ ಆ ಕರ್ತವ್ಯವನ್ನು ನೆರವೇರಿಸುವುದಾಗಿ ಅಶೋಕ್ ಪಂಡಿತ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...