alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಸನ್ನೇ ಮಾಡಿದಾಕೆ ಎಲ್ಲರಿಗೂ ಗೊತ್ತು, ಕಣ್ಣು ಮಿಟುಕಿಸಿದವನ್ಯಾರು ಗೊತ್ತಾ…?

ತನ್ನ ಕಣ್ಸನ್ನೆಯಿಂದಲೇ ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಈಗ ಸಾಮಾಜಿಕ ಜಾಲತಾಣದಲ್ಲಿ ಮನೆ ಮಾತಾಗಿದ್ದಾಳೆ. ಇನ್ನೂ ಬಿಡುಗಡೆಯಾಗದಿರುವ ಪ್ರಥಮ ಚಿತ್ರದ ಲವ್ ಸಾಂಗ್ ನಿಂದಾಗಿ ಲಕ್ಷಾಂತರ ಮಂದಿ ಯುವಕರ ನಿದ್ದೆಗೆಡಿಸಿದ್ದಾರೆ ಪ್ರಿಯಾ.

ಪ್ರಿಯಾ ಪ್ರಕಾಶ್ ವಾರಿಯರ್ ವೈಯಕ್ತಿಕ ಬದುಕಿನ ಕುರಿತು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳದ್ದಾಗಿದ್ದು, ಇದಕ್ಕಾಗಿ ಇಂಟರ್ನೆಟ್ ನಲ್ಲಿ ಹುಡುಕಾಡುತ್ತಿದ್ದಾರೆ. ಇದರ ಮಧ್ಯೆ ಪ್ರಿಯಾಳ ತಾಯಿ, ಮಗಳ ಕುರಿತ ಕೆಲವೊಂದು ಅಚ್ಚರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಈ ನಡುವೆ Oru Adaar Love ಚಿತ್ರದ Manikya Malaraya Poovi ಲವ್ ಸಾಂಗ್ ನಲ್ಲಿ ಪ್ರಿಯಾಗೆ ಕಣ್ಣು ಮಿಟುಕಿಸಿದ ನಟನ ಕುರಿತು ಹಲವರು ಕುತೂಹಲ ವ್ಯಕ್ತಪಡಿಸಿದ್ದು, ಆತನ ಕುರಿತ ಕೆಲ ಮಾಹಿತಿ ಇಲ್ಲಿದೆ.

ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ರೋಷನ್ ಅಬ್ದುಲ್ ರವೂಫ್ ಗೂ ಇದು ಮೊದಲ ಚಿತ್ರವಾಗಿದ್ದು, ಈತನ ವಯಸ್ಸು ಕೇವಲ 19. ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ನಟ, ಕನಸುಗಾರ ಹಾಗೂ ನೃತ್ಯ ಪಟು ಎಂದು ಬರೆದುಕೊಂಡಿರುವ ರೋಷನ್ ಅಬ್ದುಲ್ ರವೂಫ್, ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕೆಂಬ ಹಂಬಲ ಹೊಂದಿದ್ದಾರೆ. ಲವ್ ಸಾಂಗ್ ವೈರಲ್ ಆಗುತ್ತಿದ್ದಂತೆಯೇ ಇವರಿಗೂ ಬಹಳಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...