alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್, ಶಾರುಕ್ ಹಿಂದಿಕ್ಕಿ ಹೊಸ ದಾಖಲೆ ಬರೆದ ಖಿಲ್ಜಿ

ಪದ್ಮಾವತ್ ಚಿತ್ರದಲ್ಲಿ ಅಲ್ಲಾಹುದ್ದೀನ್ ಖಿಲ್ಜಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಣವೀರ್ ಸಿಂಗ್ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್ ರಿಂದ ಹಿಡಿದು ಸಾಮಾನ್ಯ ಅಭಿಮಾನಿಗಳವರೆಗೆ ಎಲ್ಲರೂ ರಣವೀರ್ ನಟನೆಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಖಿಲ್ಜಿ ಯಶಸ್ಸಿನ ಖುಷಿಯಲ್ಲಿರುವ ರಣವೀರ್ ಇನ್ನೊಂದು ದಾಖಲೆ ಬರೆದಿದ್ದಾರೆ.

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ಚಿತ್ರ ಈವರೆಗೆ 219.50 ಕೋಟಿ ಗಳಿಕೆ ಕಂಡಿದೆ. ಈ ಮೂಲಕ ಪದ್ಮಾವತ್ ಚಿತ್ರ 200 ಕೋಟಿ ಕ್ಲಬ್ ನಲ್ಲಿ ಸ್ಥಾನ ಪಡೆದಿದೆ. ಚಿತ್ರದಲ್ಲಿ ನಟಿಸಿರುವ ರಣವೀರ್ ಹೆಸರು ಕೂಡ 200 ಕೋಟಿ ಕ್ಲಬ್ ನಲ್ಲಿ ಸೇರ್ಪಡೆಯಾಗಿದೆ. ಚಿತ್ರದ ಮೂಲಕ 200 ಕೋಟಿ ಕ್ಲಬ್ ನಲ್ಲಿ ಸ್ಥಾನ ಪಡೆದಿರುವ ಅತಿ ಕಡಿಮೆ ವಯಸ್ಸಿನ ನಟ ಎಂಬ ಕಿರೀಟ ರಣವೀರ್ ಮುಡಿಗೇರಿದೆ.

ಈ ಪಾತ್ರ ಸವಾಲಿನ ಪಾತ್ರವಾಗಿತ್ತು. ಚಿತ್ರ 200 ಕೋಟಿ ಕ್ಲಬ್ ಸೇರಿರುವುದು ಖುಷಿ ತಂದಿದೆ. ಈ ಚಿತ್ರ ನನಗೆ ಬಹಳಷ್ಟನ್ನು ನೀಡಿದೆ ಎಂದು ರಣವೀರ್ ಟ್ವಿಟ್ ಮಾಡಿದ್ದಾರೆ. ಚಿತ್ರ 230 ಕೋಟಿ ಗಳಿಕೆ ಮಾಡುವುದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಫೆಬ್ರವರಿ 9ರಂದು ಪ್ಯಾಡ್ ಮ್ಯಾನ್ ತೆರೆಗೆ ಬರ್ತಿದ್ದು, ಇದು ಪದ್ಮಾವತ್ ಚಿತ್ರದ ಮೇಲೆ ಸ್ವಲ್ಪ ಪ್ರಭಾವ ಬೀರುವ ಸಾಧ್ಯತೆಯಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...