alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ವಿಡಿಯೋದೊಂದಿಗೆ ಮತ್ತೆ ಪ್ರತ್ಯಕ್ಷರಾಗಿದ್ದಾರೆ ಡಾನ್ಸಿಂಗ್ ಅಂಕಲ್

ಸಂಜೀವ್ ಶ್ರೀವಾಸ್ತವ್ ನಿಮಗೆ ಗೊತ್ತಿರಬೇಕಲ್ವಾ. ಅದೇ ಡ್ಯಾನ್ಸಿಂಗ್ ಅಂಕಲ್ ಅಂತ ಕೆಲ ತಿಂಗಳ ಹಿಂದೆ ಗೋವಿಂದ ಅವರ ಹಾಡಿಗೆ ನೃತ್ಯ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹಚ್ಚಿದ ಪ್ರೊಫೆಸರ್. ಮತ್ತೆ ಈಗ ಡ್ಯಾನ್ಸಿಂಗ್ ಅಂಕಲ್ ಬ್ರ್ಯಾಂಡ್ ನ್ಯೂ ಪರ್ಫಾಮೆನ್ಸ್ ಮೂಲಕ ಕಮಾಲ್ ಮಾಡೋಕೆ ಬಂದಿದ್ದಾರೆ.

ಗೋವಿಂದ ಮತ್ತು ಹೃತಿಕ್ ರೋಷನ್ ಹಾಡುಗಳಿಗೆ ಈಗಾಗ್ಲೇ ಹೆಜ್ಜೆ ಹಾಕಿರುವ ಡ್ಯಾನ್ಸಿಂಗ್ ಅಂಕಲ್ ಈ ಬಾರಿ ಬಾಲಿವುಡ್ ನ ಡಿಸ್ಕೋ ಡ್ಯಾನ್ಸರ್ ಮಿಥುನ್ ಚಕ್ರವರ್ತಿ ಹಾಡಿನ ಮೂಲಕ ವಾಪಸ್ಸಾಗಿದ್ದಾರೆ. ಆಗಸ್ಟ್ 23ರಂದು ಸಂಜೀವ್ ಶ್ರೀವಾಸ್ತವ್ ತಮ್ಮ ಸಾಮಾಜಿಕ ಜಾಲತಾಣದ ಪೇಜ್ನಲ್ಲಿ ತಮ್ಮ ಹೊಚ್ಚ ಹೊಸ ಡ್ಯಾನ್ಸ್ ಮೂವ್ಸ್ ನ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈಗಾಗ್ಲೇ ಹಾಡು ಸಾಕಷ್ಟು ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ.

ಮಿಥುನ್ ಚಕ್ರವರ್ತಿ ಮತ್ತು ಮಂದಾಕಿನಿ ಅಭಿನಯದ ಚಿತ್ರ ಜೀತೆ ಹೈ ಷಾ ಸೆ ಸಿನಿಮಾದ ಜೂಲಿ ಜೂಲಿ ಹಾಡಿಗೆ ಡ್ಯಾನ್ಸಿಂಗ್ ಅಂಕಲ್ ಹೆಜ್ಜೆ ಹಾಕಿದ್ದಾರೆ. ಫುಲ್ ಎನರ್ಜಿಯೊಂದಿಗೆ ಸ್ಟೆಪ್ ಹಾಕಿರುವ ಸಂಜೀವ್ ತಮ್ಮ ಅಭಿಮಾನಿಗಳನ್ನು ನಿರಾಸೆಗೊಳಿಸಿಲ್ಲ. ಕಿಲ್ಲಿಂಗ್ ಎಕ್ಸ್ಪ್ರೆಷನ್ಸ್ ಮೂಲಕ ನೃತ್ಯ ಮಾಡಿದ್ದಾರೆ.

ಡ್ಯಾನ್ಸಿಂಗ್ ಅಂಕಲ್ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಂಕಲ್ ನೀವು ಪವರ್ ಹೌಸ್ ಆಗಿದ್ದೀರಿ ಅನ್ನೋ ಕಾಮೆಂಟ್ಗಳು ಸೇರಿದಂತೆ ನಾನಾ ಬಗೆಯ ಕಾಮೆಂಟ್ಗಳು ಈ ನೃತ್ಯಕ್ಕೆ ಹರಿದು ಬರ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...