alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀದೇವಿಗೆ ತಾರೆಗಳ ಶ್ರದ್ಧಾಂಜಲಿ, ಮಧ್ಯಾಹ್ನ ನಡೆಯಲಿದೆ ಅಂತ್ಯಕ್ರಿಯೆ

ಫೆಬ್ರವರಿ 24ರಂದು ನಿಧನರಾಗಿದ್ದ ನಟಿ ಶ್ರೀದೇವಿ ಅವರ ಅಂತ್ಯಕ್ರಿಯೆ ಇಂದು ನೆರವೇರಲಿದೆ. ನಿನ್ನೆ ರಾತ್ರಿ 10.30ರ ವೇಳೆಗೆ ಶ್ರೀದೇವಿ ಮೃತದೇಹವನ್ನು ದುಬೈನಿಂದ ಮುಂಬೈಗೆ ತರಲಾಯ್ತು. ಅಂಧೇರಿಯಲ್ಲಿರುವ ಸೆಲೆಬ್ರೇಶನ್ಸ್ ಕ್ಲಬ್ ನಲ್ಲಿ ಶ್ರೀದೇವಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಚಿತ್ರರಂಗದ ತಾರೆಗಳೆಲ್ಲ ಆಗಮಿಸಿ ಅಗಲಿದ ಕಲಾವಿದೆಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಐಶ್ವರ್ಯಾ ರೈ, ಸುಷ್ಮಿತಾ ಸೇನ್, ಹೇಮಾ ಮಾಲಿನಿ, ಜಯಪ್ರಧಾ, ಟಬು ಸೇರಿದಂತೆ ಹಲವು ಸೆಲೆಬ್ರಿಟಿಗಳು ಆಗಮಿಸಿ ಶ್ರೀದೇವಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಇಂದು ಮಧ್ಯಾಹ್ನ 3.30ಕ್ಕೆ ಶ್ರೀದೇವಿ ಅಂತ್ಯ ಸಂಸ್ಕಾರ ನೆರವೇರಲಿದೆ. ವಿಲೆ ಪಾರ್ಲೆ ಸೇವಾ ಸಮಾಜ್ & ಹಿಂದು ಸಿಮೆಟರಿಯಲ್ಲಿ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಶ್ರೀದೇವಿ ದುಬೈನ ಹೋಟೆಲ್ ನಲ್ಲಿ ಕೊನೆಯುಸಿರೆಳೆದಿದ್ದರು.

ರಾತ್ರಿ ಮುಂಬೈ ವಿಮಾನ ನಿಲ್ದಾಣದಿಂದ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯ ಆಂಬ್ಯುಲೆನ್ಸ್ ಮೂಲಕ ಮೃತದೇಹವನ್ನು ಅವರ ನಿವಾಸಕ್ಕೆ ತರಲಾಯ್ತು. ಶ್ರೀದೇವಿ ಆಕಸ್ಮಿಕವಾಗಿ ಬಾತ್ ಟಬ್ ನಲ್ಲಿ ಮುಳುಗಿ ಮೃತಪಟ್ಟಿರೋದಾಗಿ ದುಬೈ ಆಸ್ಪತ್ರೆಯ ಮರಣೋತ್ತರ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...