alex Certify
ಕನ್ನಡ ದುನಿಯಾ       Mobile App
       

Kannada Duniya

ಕತ್ರೀನಾ ಆಯ್ತು ಈಗ ಜಾಕ್ವೆಲಿನ್ ಮೇಲೆ ರಣಬೀರ್ ಕಣ್ಣು..!

ranbirರಣಬೀರ್ ಕಪೂರ್, ಕತ್ರೀನಾ ಕೈಫ್ ಜೊತೆ ಬ್ರೇಕಪ್ ಮಾಡ್ಕೊಂಡು ಕೆಲವೇ ತಿಂಗಳುಗಳಾಗಿವೆ. ಅಷ್ಟರಲ್ಲಾಗ್ಲೇ ಕಪೂರ್ ಜೂನಿಯರ್ ಗೆ ಮತ್ತೆ ಲವ್ವಾಗಿದ್ಯಂತೆ. ಈ ಬಾರಿ ರಣಬೀರ್ ಮನಗೆದ್ದವಳು ಲಂಕಾದಿಂದ ಬಂದ ಸುಂದರಿ ಜಾಕ್ವಲಿನ್ ಫರ್ನಾಂಡಿಸ್.

ಸದ್ಯ ಬಾಲಿವುಡ್ ನ ಯಶಸ್ವಿ ನಟಿಯರಲ್ಲಿ ಜಾಕ್ವೆಲಿನ್ ಕೂಡ ಒಬ್ಬರು. ಕಳೆದ ವರ್ಷ ಬಿಡುಗಡೆಯಾದ ರಾಯ್ ಚಿತ್ರದಲ್ಲಿ ರಣಬೀರ್ ಹಾಗೂ ಜಾಕ್ವೆಲಿನ್ ಜೋಡಿಯಾಗಿ ನಟಿಸಿದ್ರು. ಚಿತ್ರ ತೋಪೆದ್ದು ಹೋದ್ರೂ, ಆ ಸಮಯದಲ್ಲಿ ರಣಬೀರ್ ಗೆ ಜಾಕ್ವೆಲಿನ್ ಮೇಲೆ ಪ್ರೀತಿ ಹುಟ್ಟಿದೆ ಎನ್ನಲಾಗ್ತಿದೆ. ಇತ್ತೀಚೆಗಷ್ಟೆ ಫುಟ್ಬಾಲ್ ಟೂರ್ನಿಯೊಂದರ ಉದ್ಘಾಟನೆಗಾಗಿ ರಣಬೀರ್, ಜಾನ್ ಅಬ್ರಾಹಂ, ವರುಣ್ ಧವನ್ ಮತ್ತು ಜಾಕ್ವೆಲಿನ್ ಗುವಾಹಟಿಗೆ ತೆರಳಿದ್ರು. ಕಾರ್ಯಕ್ರಮದುದ್ದಕ್ಕೂ ರಣಬೀರ್ ಕಣ್ಣು ಜಾಕ್ವೆಲಿನ್ ಮೇಲಿತ್ತಂತೆ.

ಈಗಾಗ್ಲೇ ಹಲವು ಬಾರಿ ಕಾಫಿ, ಊಟದ ನೆಪದಲ್ಲಿ ರಣಬೀರ್ ಜಾಕ್ವೆಲಿನ್ ರನ್ನು ಮೆಚ್ಚಿಸಲು ಟ್ರೈ ಮಾಡಿ ಸೋತಿದ್ದಾರೆ. ಯಾಕಂದ್ರೆ ಜಾಕ್ವೆಲಿನ್ ಗೆ ರಣಬೀರ್ ಬಗ್ಗೆ ಆಸಕ್ತಿಯೇ ಇಲ್ಲವಂತೆ. ರಣಬೀರ್ ಜೊತೆ ಕಾಫಿಗೆ ಹೋಗಲು ಜಾಕ್ವೆಲಿನ್ ಒಲ್ಲೆ ಎಂದಿದ್ದಾಳೆ. ಹಾಗಾಗಿ ಲಂಕಾದ ಚೆಲುವೆಗೆ ಕಾಳು ಹಾಕುತ್ತಿರುವ ರಣಬೀರ್ ವ್ಯರ್ಥ ಪ್ರಯತ್ನ ಮಾಡ್ತಿದ್ದಾರೋ ಏನೋ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...