alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಾಭಾರತ ಸಿನೆಮಾ ಮಾಡ್ತಿದ್ದಾರಾ ರಾಜಮೌಳಿ?

ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರಿಗೆ ‘ಬಾಹುಬಲಿ-2’ ಚಿತ್ರದ ಮೂಲಕ ನಿರೀಕ್ಷೆಗೂ ಮೀರಿದ ಯಶಸ್ಸು ಸಿಕ್ಕಿದೆ. ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಿರ್ದೇಶಕರೀಗ ಮತ್ತೊಂದು ಹೊಸ ಸಾಹಸಕ್ಕೆ ಕೈಹಾಕ್ತಿದ್ದಾರಂತೆ. ‘ಮಹಾಭಾರತ’ವನ್ನು ತೆರೆಯ ಮೇಲೆ ತರಲು ರಾಜಮೌಳಿ ಮುಂದಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ.

ಆದ್ರೆ ಅಸಲಿ ವಿಷಯ ಏನು ಅನ್ನೋದನ್ನು ಖುದ್ದು ರಾಜಮೌಳಿ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಅವರು ತಮ್ಮ ಮುಂದಿನ ಚಿತ್ರದ ಬಗ್ಗೆ ಇನ್ನೂ ಯೋಚಿಸಿಯೇ ಇಲ್ಲವಂತೆ. ಮಹಾಭಾರತ ಸಿನೆಮಾ ಮಾಡೋದು ನನ್ನ ಕನಸು ನಿಜ, ಆದ್ರೆ ಸದ್ಯಕ್ಕಂತೂ ಅದನ್ನು ಮಾಡ್ತಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.

ಮುಂದಿನ ಪ್ರಾಜೆಕ್ಟ್ ಗೂ ಮುನ್ನ ಸ್ವಲ್ಪ ಬ್ರೇಕ್ ತೆಗೆದುಕೊಳ್ತೀನಿ ಎಂದಿದ್ದಾರೆ. ಬಾಹುಬಲಿ ಯಶಸ್ಸಿನ ಖುಷಿಯೊಂದಿಗೆ ಫುಲ್ ರಿಲ್ಯಾಕ್ಸ್ ಆಗಿ, ಮತ್ತೊಂದು ಹಿಟ್ ಸಿನೆಮಾಕ್ಕೆ ಕೈಹಾಕುವ ಆಲೋಚನೆಯಲ್ಲಿದ್ದಾರೆ ರಾಜಮೌಳಿ. ಹಾಗಾಗಿ ಅವರ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಲ್ಲೂ ಬೆಟ್ಟದಷ್ಟು ನಿರೀಕ್ಷೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...