alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಾಹುಬಲಿ’ ಅಬ್ಬರದಲ್ಲೂ ಸದ್ದು ಮಾಡ್ತಿದೆ ‘ಸ್ಪೈಡರ್’

mahesh13_0

ಸೂಪರ್ ಸ್ಟಾರ್ ಗಳು ಮತ್ತವರ ಸಿನೆಮಾ ಬಗ್ಗೆ ಅಭಿಮಾನಿಗಳಿಗಿರುವ ಕ್ರೇಜ್ ಕಡಿಮೆಯಾಗೋದೇ ಇಲ್ಲ. ಬಾಹುಬಲಿ – 2  ಚಿತ್ರ ಈಗಾಗ್ಲೇ ಬಾಕ್ಸ್ ಆಫೀಸ್ ಅನ್ನು ಧೂಳಿಪಟ ಮಾಡಿದೆ. ಇನ್ನೊಂದ್ಕಡೆ ಮಹೇಶ್ ಬಾಬು ಅಭಿನಯದ ‘ಸ್ಪೈಡರ್’ ಚಿತ್ರದ ಟೀಸರ್  ಕೂಡ ಹೊಸ ದಾಖಲೆ ಮಾಡಿದೆ.

ಒಂದೇ ದಿನದಲ್ಲಿ ಸ್ಪೈಡರ್ ಚಿತ್ರದ ಟೀಸರ್ ಅನ್ನು 5 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಯುಟ್ಯೂಬ್ ನಲ್ಲಿ ಅತಿಹೆಚ್ಚು ಮಂದಿ ವೀಕ್ಷಿಸಿದ ಟೀಸರ್ ಅನ್ನೋ ಹೆಗ್ಗಳಿಕೆ ಸ್ಪೈಡರ್ ಪಾಲಾಗಿದೆ. ಎಸ್.ಎಸ್.ರಾಜಮೌಳಿ ಅವರ ‘ಬಾಹುಬಲಿ-2’ ಚಿತ್ರದ ಟೀಸರ್ ಅನ್ನು 24 ಗಂಟೆಗಳಲ್ಲಿ 65 ಮಿಲಿಯನ್ ಜನರು ವೀಕ್ಷಿಸಿದ್ದರು.

ವಿಎಫ್ಎಕ್ಸ್ ಮತ್ತು ಗ್ರಾಫಿಕ್ಸ್ ಬಳಸಿ ಮಾಡಿರೋ ಸ್ಪೈಡರ್ ಟೀಸರ್ ಕೇವಲ 1 ನಿಮಿಷವಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಗುಪ್ತಚರ ಅಧಿಕಾರಿಯ ಪಾತ್ರದಲ್ಲಿ ಮಹೇಶ್ ಬಾಬು ಖಡಕ್ ಆಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಅದ್ಭುತ ಆ್ಯಕ್ಷನ್ ಸೀನ್ ಗಳಿದ್ದು, ಚೆನ್ನೈನಲ್ಲಿ ಚಿತ್ರೀಕರಣ ಮಾಡಲಾಗಿದೆ. ಸಪ್ಟೆಂಬರ್ 30ರಂದು ಸ್ಪೈಡರ್ ಚಿತ್ರ ರಿಲೀಸ್ ಆಗಲಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...