alex Certify
ಕನ್ನಡ ದುನಿಯಾ       Mobile App
       

Kannada Duniya

ಪೋಸ್ ನೀಡಲು ಹೋಗಿ ಯಡವಟ್ಟು ಮಾಡಿಕೊಂಡ್ರಾ ರಣವೀರ್

ರಣವೀರ್ ಸಿಂಗ್ ಬಾಲಿವುಡ್ ನ ಖ್ಯಾತ ನಟ. ಈ ಸ್ಟಾರ್ ನಟನಿಗೆ ಸಾಕಷ್ಟು ಅಭಿಮಾನಿಗಳ ಬಳಗ ಇದೆ. ಅಭಿಮಾನಿಗಳ ಬೇಡಿಕೆಗೆ ರಣವೀರ್ ಸ್ಪಂದಿಸುತ್ತಾರೆ. ಸದ್ಯ ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರ ‘ಸಿಂಬಾ’ದಲ್ಲಿ ರಣವೀರ್ ಫುಲ್ ಬ್ಯುಸಿ ಆಗಿದ್ದಾರೆ.

ರಣವೀರ ಸಿಂಗ್ ಮುಂಬೈನಲ್ಲಿ ತಮ್ಮ ಕಾರಿನಲ್ಲಿ ತೆರಳುತ್ತಿದ್ದಾಗ, ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರ್ ಚಲಾವಣೆ ಮಾಡಿಕೊಂಡು ಹೋಗುತ್ತಿದ್ದವನನ್ನು ಕಂಡು ಗರಂ ಆಗಿದ್ದಾರೆ. ಅಲ್ಲದೆ ಕಾರ್ ಚಾಲಕನಿಗೆ ರಣವೀರ್, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾರ್ ಚಾಲಕ ಕ್ಷಮೆ ಯಾಚಿಸಿದ್ರೂ, ರಣವೀರ್ ಸುಮ್ಮನಾಗದೆ ಆತನ ವಿರುದ್ಧ ಕಿಡಿ ಕಾರಿದ್ದಾರೆ. ಅಡ್ಡಾದಿಡ್ಡಿ ಕಾರ್ ಚಲಾವಣೆ ಮಾಡುತ್ತಿದ್ದ ವ್ಯಕ್ತಿ, ಈ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಅಲ್ಲದೆ ವಿಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದಾರೆ. ಇತ್ತೀಚೆಗೆ ಅನುಷ್ಕಾ ಶರ್ಮಾ ಸಹ ಇಂತಹದ್ದೇ ಘಟನೆಯಲ್ಲಿ ಕಾರ್ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದನ್ನು ಸ್ಮರಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...