alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಬಿಟ್ಮೇಲೆ ಈತನ ಜೊತೆ ಡೇಟಿಂಗ್ ಶುರು ಮಾಡಿದ ನಟಿ

ಬಾಲಿವುಡ್ ನಟಿ ಹಾಗೂ ಬಿಗ್ ಬಾಸ್ ನ ಮಾಜಿ ಸ್ಪರ್ಧಿ ಸೋಫಿಯಾ ಹಯಾತ್ ಪತಿಯಿಂದ ದೂರವಾಗಿದ್ದಾಳೆ. ವ್ಲಾಡ್ ಮೇಲೆ ಗಂಭೀರ ಆರೋಪ ಮಾಡಿರುವ ಸೋಫಿಯಾ ಆತನನ್ನು ಮನೆಯಿಂದ ಹೊರ ಹಾಕಿದ್ದಾಳೆ. ಈ ವಿಷ್ಯವನ್ನು ಸ್ವತಃ ಸೋಫಿಯಾ ಸಾಮಾಜಿಕ ಮಾಧ್ಯಮಗಳ ಮೂಲಕ ಎಲ್ಲರಿಗೂ ತಿಳಿಸಿದ್ದಳು. ಪತಿ ದೂರವಾದ್ಮೇಲೆ ಸೋಫಿಯಾಳ ಮತ್ತೊಂದು ಪ್ರೇಮ ಕಥೆ ಶುರುವಾಗಿದೆ.

ಹಾಟ್ ಮಾಡೆಲ್ ಸೋಫಿಯಾ, ವ್ಲಾಡ್ ಕೈ ಹಿಡಿದು ಒಂದು ವರ್ಷವೂ ಆಗಿರಲಿಲ್ಲ. ವ್ಲಾಡ್ ಕಳ್ಳ, ಮೋಸಗಾರ ಎಂದಿದ್ದ ಸೋಫಿಯಾ ಗರ್ಭಪಾತಕ್ಕೂ ಆತನೇ ಕಾರಣ ಎಂದಿದ್ದಳು. ಮಗು, ಪತಿ ಇಬ್ಬರನ್ನೂ ಕಳೆದುಕೊಂಡು ದುಃಖದಲ್ಲಿದ್ದ ಸೋಫಿಯಾಗೆ ಈಗ ಇನ್ನೊಬ್ಬ ಸಂಗಾತಿ ಸಿಕ್ಕಿದ್ದಾನಂತೆ.

ಮೂಲಗಳ ಪ್ರಕಾರ ಬಿಗ್ ಬಾಸ್ ಮಾಜಿ ಸ್ಪರ್ಧಿ, ಸ್ಪ್ಯಾನಿಶ್ ಸಿಂಗರ್ ದರಾಯಸ್ ಕ್ಯಾಂಪ್ ಬೆಲ್ ಜೊತೆ ಡೇಟಿಂಗ್ ನಲ್ಲಿದ್ದಾಳಂತೆ. ಇಬ್ಬರ ಮಧ್ಯೆ ಈಗಷ್ಟೇ ಸಂಬಂಧ ಶುರುವಾಗಿದೆ. ಪರಸ್ಪರ ಅರ್ಥ ಮಾಡಿಕೊಳ್ತಿದ್ದಾರೆ ಎಂದು ಸೋಫಿಯಾ ಸ್ನೇಹಿತರು ಗುಟ್ಟು ಬಿಟ್ಟುಕೊಟ್ಟಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...