alex Certify
ಕನ್ನಡ ದುನಿಯಾ       Mobile App
       

Kannada Duniya

ನೈತಿಕ ಹೊಣೆ ಹೊತ್ತು ಹೌಸ್ ಫುಲ್-4 ನಿಂದ ಹೊರನಡೆದ ಸಾಜಿದ್ ಖಾನ್

ಬಾಲಿವುಡ್ ಮೀ ಟೂ ಅಭಿಯಾನಕ್ಕೆ ನಟ ಅಕ್ಷಯ್ ಕುಮಾರ್ ಬೆಂಬಲ ನೀಡಿದ್ದಾರೆ. ಅಕ್ಷಯ್, ಹೌಸ್ ಫುಲ್-4 ನಿರ್ದೇಶಕ  ಸಾಜಿದ್ ಖಾನ್ ಮೇಲೆ ಬಂದ ಆರೋಪದ ಬಗ್ಗೆ ಸೂಕ್ತ ನಿರ್ಣಯ ಬರುವವರೆಗೂ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಟ್ವೀಟ್ ಮಾಡಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ನಿರ್ದೇಶಕ ಸಾಜಿದ್ ಖಾನ್ ನೈತಿಕ ಹೊಣೆ ಹೊತ್ತು ಚಿತ್ರ ತೊರೆದಿದ್ದಾರೆ.

ಸಾಜಿದ್ ಖಾನ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ನನ್ನ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ನನ್ನ ಕುಟುಂಬ, ನಿರ್ಮಾಪಕರು ಹಾಗೂ ಹೌಸ್ ಫುಲ್-4 ತಂಡದ ಮೇಲೆ ಒತ್ತಡವಿದ್ದು, ನಾನು ನೈತಿಕ ಹೊಣೆ ಹೊತ್ತು ಹೌಸ್ ಫುಲ್-4 ತಂಡದಿಂದ ಹೊರ ಹೋಗ್ತಿದ್ದೇನೆ. ಸತ್ಯ ಬಹಿರಂಗವಾಗುವವರೆಗೂ ಯಾವುದೇ ನಿರ್ಣಯಕ್ಕೆ ಬರಬೇಡಿ ಎಂದು ಸಹೋದ್ಯೋಗಿಗಳಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆಂದು ಸಾಜಿದ್ ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮೊದಲು ಅಕ್ಷಯ್, ಶೂಟಿಂಗ್ ರದ್ದು ಮಾಡಿ ವಾಪಸ್ ಬಂದಿದ್ದೇನೆ. ಸತ್ಯ ಹೊರ ಬರುವವರೆಗೂ ಶೂಟಿಂಗ್ ರದ್ದು ಮಾಡಿ ಎಂದು ನಿರ್ಮಾಪಕರಲ್ಲಿ ವಿನಂತಿ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...