alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಸ್ಟಾಗ್ರಾಂ ನಲ್ಲಿ ಅಪ್ಡೇಟ್ ಆಯ್ತು ಐಶ್ ಮೇಲಿನ ಅಭಿ ಪ್ರೀತಿ

ಮದುವೆಯಾಗಿ 10 ವರ್ಷ ಕಳೆದ್ರೂ ಬಾಲಿವುಡ್ ನ ಈ ಜೋಡಿ ಇನ್ನೂ ನವದಂಪತಿಗಳಂತೆಯೇ ಇದ್ದಾರೆ. ಅದು ಬೇರೆ ಯಾರು ಅಲ್ಲ, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್. ಇದಕ್ಕೆ ಉದಾಹರಣೆ ಹೊಸದಾಗಿ ತೆರೆದಿರುವ ಇವರುಗಳ ಇನ್ಸ್ಟಾಗ್ರಾಂ ಖಾತೆ.

ಐಶ್ವರ್ಯ ರೈ ಇನ್ಸ್ಟಾಗ್ರಾಂ ಖಾತೆ ತೆರೆಯುತ್ತಿದ್ದಂತೆ ಸುಮಾರು 2.5 ಲಕ್ಷ ಫಾಲೋವರ್ಸ್ ಆಗಿದ್ದಾರೆ. ಈ ಮಧ್ಯೆ ಅಭಿಷೇಕ್ ಕೂಡಾ ಹೊಸ ಇನ್ಸ್ಟಾಗ್ರಾಂ ಖಾತೆ ತೆರೆದು ಅದಕ್ಕೆ ಫೋಟೋಗಳನ್ನು ಅಪ್ ಲೋಡ್ ಮಾಡ್ತಿದ್ದಾರೆ.

2007 ರಲ್ಲಿ ನನ್ನ ಐಶ್ವರ್ಯಾ ಮದುವೆಯಾಗಿ ಕೆಲವೇ ದಿನಗಳಲ್ಲಿ ಕ್ಯಾನೆ ಚಲನಚಿತ್ರೋತ್ಸವ ನಡೆದಿತ್ತು. ಇದೀಗ ಐಶ್ವರ್ಯ, ಮಿಸೆಸ್ ಬಚ್ಚನ್ ಆಗಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕ್ತಿದ್ದಾರೆ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿರುವ ಅಭಿಷೇಕ್, ಕ್ಯಾನೆ ರೆಡ್ ಕಾರ್ಪೆಟ್ ಮೇಲೆ ನಡೆದ ಹತ್ತು ವರ್ಷದ ಹಿಂದಿನ ಫೋಟೋವನ್ನು ಹಾಕೋ ಮೂಲಕ ಪತ್ನಿ ಮೇಲಿನ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ.

ಇನ್ಸ್ಟಾಗ್ರಾಂ ನಲ್ಲಿ ಮೊದಲ ಬಾರಿಗೆ ಖಾತೆ ತೆರೆದಿರುವ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ, ಮೊದಲ ಫೋಟೋವನ್ನು ತಮ್ಮ ಮಗಳು ಆರಾಧ್ಯಗೆ ಅರ್ಪಿಸಿದ್ದಾರೆ. ಆ ಫೋಟೋಕ್ಕೆ ನಾನು ಮತ್ತೆ ಹುಟ್ಟಿ ಬಂದೆ ಎಂಬ ಶೀರ್ಷಿಕೆ ನೀಡಿದ್ದಾರೆ. ಇನ್ನು ಕ್ಯಾನೆ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ಐಶ್ವರ್ಯಗೆ ಪುತ್ರಿ ಆರಾಧ್ಯ ಸಾಥ್ ನೀಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...