alex Certify
ಕನ್ನಡ ದುನಿಯಾ       Mobile App
       

Kannada Duniya

ದಶಕಗಳ ಬಳಿಕ ಮತ್ತೆ ಒಂದಾಗಿದ್ದಾರೆ ‘ಚಕ್ ದೇ ಇಂಡಿಯಾ’ ಗರ್ಲ್ಸ್…!

ಭಾರತದ ಮಹಿಳಾ ಹಾಕಿ ತಂಡದ ಕುರಿತ, ಬಾಲಿವುಡ್ ಖ್ಯಾತ ನಟ ಶಾರುಕ್ ಖಾನ್ ಅಭಿನಯದ ‘ಚಕ್ ದೇ ಇಂಡಿಯಾ’ ಚಿತ್ರ ಯಾರಿಗೆ ಗೊತ್ತಿಲ್ಲ ಹೇಳಿ? ಅದರಲ್ಲೂ ಈ ಚಿತ್ರದಲ್ಲಿ ಹಾಕಿ ತಂಡದ ಸದಸ್ಯರಾಗಿ ಅಭಿನಯಿಸಿದ ನಟಿಯರನ್ನಂತೂ ಮರೆಯಲಾಗದು.

ಈ ನಟಿಯರ ಪೈಕಿ ಕೆಲವರು ಮಾತ್ರ ಕ್ರೀಡಾ ಹಿನ್ನೆಲೆಯಿಂದ ಬಂದವರಾಗಿದ್ದರೂ ಸಹ ಮಿಕ್ಕವರು ಇದ್ಯಾವುದಕ್ಕೂ ಕಮ್ಮಿ ಇಲ್ಲದಂತೆ ಅಭಿನಯಿಸಿದ್ದರು. ಹೀಗಾಗಿ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಗಳಿಸಿತ್ತಲ್ಲದೆ ಕ್ರಿಕೆಟ್ ಹೊರತಾದ ಮತ್ತೊಂದು ಕ್ರೀಡೆಯೂ ಭಾರತದಲ್ಲಿ ವಿಜೃಂಭಿಸಿತ್ತು ಎಂಬುದನ್ನು ಸಾಬೀತುಪಡಿಸಿದ್ದರು.

‘ಚಕ್ ದೇ ಇಂಡಿಯಾ’ ಚಿತ್ರದಲ್ಲಿ ಭಾರತ ಹಾಕಿ ತಂಡದ ಆಟಗಾರ್ತಿಯರಾಗಿ ಕಾಣಿಸಿಕೊಂಡ ಬಹುತೇಕರು ಸಿನೆಮಾ ಹಿನ್ನೆಲೆ ಹೊಂದಿರಲಿಲ್ಲ. ಚಿತ್ರ ಬಿಡುಗಡೆಗೊಂಡ ಬಳಿಕ ಇದರಲ್ಲಿ ಅಭಿನಯಿಸಿದ್ದ ಬಹಳಷ್ಟು ಮಂದಿ ನೇಪಥ್ಯಕ್ಕೆ ಸರಿದಿದ್ದರು. ಇದೀಗ ದಶಕಗಳ ಬಳಿಕ ‘ಚಕ್ ದೇ ಇಂಡಿಯಾ’ದಲ್ಲಿ ಅಭಿನಯಿಸಿದ್ದ ಇಬ್ಬರು ನಟಿಯರು ಮತ್ತೊಂದು ಚಿತ್ರಕ್ಕೆ ಜೊತೆಯಾಗಿದ್ದಾರೆ. ‘ಮಾನ್ಸೂನ್ ಫುಟ್ಬಾಲ್’ ಚಿತ್ರದಲ್ಲಿ ಸಾಗರಿಕಾ ಘಾಟ್ಗೆ ಹಾಗೂ ಚಿತ್ರಾಶಿ ರಾವತ್ ಜೊತೆಯಾಗಿ ನಟಿಸುತ್ತಿದ್ದು, ಈ ಚಿತ್ರವೂ ಯಶಸ್ಸು ಗಳಿಸುವ ವಿಶ್ವಾಸ ಹೊಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...