alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಗೆ ಬರಲು ವಯಸ್ಕರ ಚಿತ್ರಗಳ ನಟ ಹಾಕಿದ್ದಾನೆ ಈ ಕಂಡೀಷನ್

ಬ್ರಿಟಿನ್ ಮೂಲದ ವಯಸ್ಕರ ಚಿತ್ರಗಳ ನಟ ಡ್ಯಾನಿ ಡೇ ‘ಬಿಗ್ ಬಾಸ್’ ಸೀಸನ್ 12 ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡ್ಯಾನಿ ‘ಬಿಗ್ ಬಾಸ್’ ಗೆ ಬರೋದಕ್ಕೆ ಕಂಡೀಷನ್ ಒಂದನ್ನ ಹಾಕಿದ್ದಾರೆ.

ತನ್ನ ಸ್ನೇಹಿತೆ ಮತ್ತು ನಟಿ ಮಹಿಕಾ ಶರ್ಮಾ ಕೂಡ ‘ಬಿಗ್ ಬಾಸ್’ ನಲ್ಲಿ ಸ್ಪರ್ಧಿಯಾದ್ರೆ ಮಾತ್ರ ತಾನು ಷೋನಲ್ಲಿ ಭಾಗವಹಿಸ್ತೀನಿ ಅಂತ ಡ್ಯಾನಿ ತಿಳಿಸಿದ್ದಾನೆ. ಸದ್ಯ ಡ್ಯಾನಿ ಮತ್ತು ಮಹಿಕಾ ಶರ್ಮಾ ಮಾಡ್ರನ್ ಕಲ್ಚರ್ ಅನ್ನೋ ವಯಸ್ಕರ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಅಲ್ಲದೇ ಮತ್ತೊಂದು ಸಿನಿಮಾವನ್ನು ನಿರ್ಮಾಣ ಮಾಡ್ತಿದ್ದಾರೆ. ಹಾಗಾಗಿ ಮಹಿಕಾ ಬಂದ್ರೆ ನಾನು ಷೋ ಗೆ ಬರ್ತೀನಿ ಅಂತಿದ್ದಾರೆ ಡ್ಯಾನಿ.

ಷೋನಲ್ಲಿ ನಾನು ಸ್ಪರ್ಧೆ ಮಾಡ್ತೀನೋ ಇಲ್ವೋ ಅನ್ನೋದು ನನಗೆ ಗೊತ್ತಿಲ್ಲ. ನನ್ನ ಮ್ಯಾನೇಜರ್ ಈ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಅವರಿಂದ ನನಗೆ ಷೋ ಒಂದರಲ್ಲಿ ಭಾಗವಹಿಸೋಕೆ ಆಫರ್ ಬಂದಿದೆ ಅನ್ನೋ ವಿಚಾರ ಬಂದಿದೆ. ಅದು ‘ಬಿಗ್ ಬಾಸ್’ ಅಥವಾ ‘ಬಿಗ್ ಬ್ರದರ್’ ಅನ್ನೋ ಬಗ್ಗೆ ಖಾತ್ರಿಯಿಲ್ಲ. ಹಾಗೇನಾದ್ರು ಆಗಿದ್ದರೆ ಮಹಿಕಾ ಕೂಡ ಜೊತೆಗಿದ್ದರೆ ಮಾತ್ರ ತಾನು ಷೋ ನಲ್ಲಿ ಸ್ಪರ್ಧೆ ಮಾಡೋದ್ರ ಬಗ್ಗೆ ಯೋಚನೆ ಮಾಡ್ತೀನಿ ಎಂದಿದ್ದಾನೆ ಡ್ಯಾನಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...