alex Certify
ಕನ್ನಡ ದುನಿಯಾ       Mobile App
       

Kannada Duniya

‘ನಿನ್ನ ಬೆತ್ತಲೆಗೊಳಿಸದಿದ್ರೆ ನನ್ನ ಹೆಸರು ಆದಿತ್ಯ ನಾರಾಯಣ್ ಅಲ್ಲ’

ರಾಯ್ ಪುರ: ‘ನೀನೀಗ ನನ್ನನ್ನು ತಡೆಯಬಹುದು. ವಿಮಾನದಿಂದ ನನ್ನನ್ನು ಹೊರಹಾಕಬಹುದು. ಆದರೆ, ಹೇಗಾದರೂ ಮಾಡಿ ಮುಂಬೈಗೆ ತಲುಪುತ್ತೇನೆ. ಆಮೇಲೆ ನಿನ್ನ ಚೆಡ್ಡಿ ಬಿಚ್ಚುತ್ತೇನೆ.’

ಹೀಗೆಂದು ಆವಾಜ್ ಹಾಕಿದ್ದು ಆದಿತ್ಯ ನಾರಾಯಣ್. ಖ್ಯಾತ ಗಾಯಕ ಉದಿತ್ ನಾರಾಯಣ್ ಪುತ್ರನಾಗಿರುವ ಆದಿತ್ಯ ನಾರಾಯಣ್ ಛತ್ತೀಸ್ ಗಢದ ರಾಯ್ ಪುರ ವಿಮಾನ ನಿಲ್ದಾಣದಲ್ಲಿ ಏರ್ ಲೈನ್ಸ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ.

ಜಾಸ್ತಿ ತೂಕದ ಲಗೇಜ್ ಹೊಂದಿದ್ದ ಕಾರಣ ಇಂಡಿಗೋ ಏರ್ ಲೈನ್ಸ್ ಸಿಬ್ಬಂದಿ ಆದಿತ್ಯಗೆ ಸೂಚನೆ ನೀಡಿದ್ದಾರೆ. ಇದಕ್ಕೆ ಆಕ್ಷೇಪಿಸಿದ ಆದಿತ್ಯ ನಾರಾಯಣ್ ಸಿಬ್ಬಂದಿಯೊಂದಿಗೆ ಏರಿದ ದನಿಯಲ್ಲಿ ಮಾತನಾಡಿದ್ದಾರೆ.

ನೀವು ನನ್ನನ್ನು ಬ್ಯಾನ್ ಮಾಡಬಹುದು. ಆದರೆ, ಕಾರಿನಲ್ಲಿ ಮುಂಬೈಗೆ ಹೋಗುತ್ತೇನೆ. ಬಳಿಕ ನಿನ್ನನ್ನು ಬೆತ್ತಲೆಗೊಳಿಸುತ್ತೇನೆ. ಹಾಗೇ ಮಾಡದಿದ್ದರೆ ನನ್ನ ಹೆಸರು ಆದಿತ್ಯ ನಾರಾಯಣ್ ಅಲ್ಲ ಎಂದು ಬೆದರಿಕೆ ಹಾಕಿದ್ದಾರೆ.

ಇದನ್ನು ಅಲ್ಲಿದ್ದವರು ಸೆರೆ ಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ. ಆದಿತ್ಯ ನಾರಾಯಣ್ ಅನುಚಿತ ವರ್ತನೆಗೆ ಅಸಮಾಧಾನ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...