alex Certify
ಕನ್ನಡ ದುನಿಯಾ       Mobile App
       

Kannada Duniya

ತೂಕ ಇಳಿಸಿಕೊಳ್ಳಲು ಬಯಸುವ ಯುವತಿಯರಿಗೆ ಈ ನಟಿಯರು ಮಾದರಿ

‘ಮನಸ್ಸಿದ್ದರೆ ಮಾರ್ಗ’ ಅನ್ನೋದು ತೂಕ ಇಳಿಸಿಕೊಳ್ಳೋ ವಿಷಯಕ್ಕೂ ಅನ್ವಯಿಸುತ್ತೆ. ಗಟ್ಟಿ ಮನಸ್ಸು ಮಾಡಿ, ಸಾಕಷ್ಟು ವರ್ಕೌಟ್, ಯೋಗ, ಡ್ಯಾನ್ಸ್ ಹೆಲ್ತಿ ಡಯಟ್ ಮಾಡಿದ್ರೆ ಯಾರು ಬೇಕಾದ್ರೂ ತೂಕ ಇಳಿಸಿಕೊಳ್ಳಬಹುದು ಅನ್ನೋದಕ್ಕೆ ಈ ಸೆಲೆಬ್ರಿಟಿಗಳೇ ಸಾಕ್ಷಿ.

ದಾಲ್ಜಿಯೆಟ್ ಕೌರ್ : ಸಾಕಷ್ಟು ವರ್ಕೌಟ್ ಮಾಡುವ ಮೂಲಕ ಬರೋಬ್ಬರಿ 24 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ದೀಪಿಕಾ ಸಿಂಗ್ : ಗರ್ಭಿಣಿಯಾಗಿದ್ದಾಗ ಸಾಕಷ್ಟು ದಪ್ಪಗಾಗಿದ್ದವರು ನಂತರ ಓಡಿಸ್ಸಿ ನೃತ್ಯ ಹಾಗೂ ಯೋಗದ ಮೂಲಕ ಸಾಕಷ್ಟು ಸಣ್ಣಗಾಗಿದ್ದಾರೆ.

ನೇಹಾ ಪೆಂಡ್ಸ್ : ಕಪಿಲ್ ಶರ್ಮಾ ಶೋ ದಲ್ಲಿ ಕಾಣಿಸಿಕೊಳ್ಳುವ ಈ ನಟಿ ಈಗ ಸಾಕಷ್ಟು ಸಣ್ಣಗಾಗಿದ್ದಾರೆ.

ಶಫಾಕ್ ನಾಜ್ : ಸಾಕಷ್ಟು ಹಿಂದಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ಶಫಾಕ್, ಕಠಿಣ ವರ್ಕೌಟ್ ಮೂಲಕ 13 ಕೆಜಿ ತೂಕ ಕಡಿಮೆಯಾಗಿದ್ದಾರೆ.

ರಶ್ಮಿ ದೇಸಾಯಿ : ಉತ್ತರನ್ ಧಾರಾವಾಹಿಯ ರಶ್ಮಿ ಈಗ ಸಪೂರ ಬಳ್ಳಿಯಂತಾಗಿದ್ದಾರೆ.

ರೂಪ್ ದುರ್ಗಾಪಾಲ್ : ಬಾಲಿಕಾ ವಧೂ ಖ್ಯಾತಿಯ ರೂಪ್ ತೂಕ ಕಳೆದುಕೊಂಡು ಬಿಕಿನಿ ಡ್ರೆಸ್ ಗೂ ಫಿಟ್ ಆಗಿದ್ದಾರೆ.

ಜೂಹಿ ಪಾರ್ಮರ್ : ಈ ನಟಿ ಬರೋಬ್ಬರಿ 17 ಕೆಜಿ ತೂಕ ಇಳಿಸಿಕೊಂಡು ಮತ್ತೆ ಕಿರುತೆರೆಗೆ ವಾಪಸ್ಸಾಗಿದ್ದಾರೆ.

ದಿವ್ಯಾಂಕಾ ತ್ರಿಪಾಠಿ : ಈಕೆ ಕೂಡ ಬರೋಬ್ಬರಿ 8 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ದಿಶಾ ಪಾರ್ಮರ್ : ಈ ಕಿರುತೆರೆ ನಟಿ ಜಿಮ್ ನಲ್ಲಿ ಸಾಕಷ್ಟು ವರ್ಕೌಟ್ ಮಾಡಿ ಸಣ್ಣಗಾಗಿದ್ದಾರೆ.

ದೆಬಿನಾ ಬೊನ್ನರ್ಜಿ : ಜಿಮ್ ನಲ್ಲೇ ಸಾಕಷ್ಟು ಸಮಯ ಕಳೆದ ದೆಬೀನಾ ಮತ್ತೆ ಮೊದಲಿನ ತೂಕಕ್ಕೇ ಬಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...