alex Certify
ಕನ್ನಡ ದುನಿಯಾ       Mobile App
       

Kannada Duniya

ನನ್ನನ್ನು 10 ಮಂದಿ ದುರ್ಬಳಕೆ ಮಾಡಿಕೊಂಡಿದ್ದಾರೆಂದ ನಟಿ

ಬೆಂಗಳೂರು: ಮಠದಲ್ಲಿಯೇ ರಾಸಲೀಲೆ ನಡೆಸಿದ ಬೆಂಗಳೂರು ಉತ್ತರ ತಾಲ್ಲೂಕಿನ ಹುಣಸಮಾರನಹಳ್ಳಿಯ ಮದ್ದೇವಣಾಪುರ ಮಠದ ದಯಾನಂದ ಸ್ವಾಮೀಜಿಯನ್ನು ಹೊರ ಹಾಕಲಾಗಿದೆ.

ತಮಗೆ ಅನ್ಯಾಯವಾಗಿದ್ದು, ಪ್ರಕರಣದ ಹಿಂದಿರುವವರ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಸ್ವಾಮೀಜಿ ಹಿಂದೆ ಹೇಳಿದ್ದರು. ಈ ಪ್ರಕರಣದಲ್ಲಿ ಸ್ವಾಮೀಜಿಯೊಂದಿಗೆ ಕಾಣಿಸಿಕೊಂಡಿದ್ದ ನಟಿ ತಮಗಾದ ನೋವನ್ನು ಹೇಳಿಕೊಂಡಿದ್ದಾರೆ.

ಸಂತ್ರಸ್ಥ ನಟಿ ಆತ್ಮಹತ್ಯೆಗೆ ಯತ್ನಿಸಿದ್ದು, ಈಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು 3 -4 ದಿನಗಳಲ್ಲಿ ವಕೀಲರ ಮೂಲಕ ಕೇಸ್ ದಾಖಲಿಸುವುದಾಗಿ ತಿಳಿಸಿದ್ದಾರೆ.

ನನಗೆ ಕೊಲೆ ಬೆದರಿಕೆ ಇದ್ದ ಕಾರಣ ಎಲ್ಲಿಯೂ ಕಾಣಿಸಿಕೊಳ್ಳದೇ ಆತ್ಮಹತ್ಯೆಗೆ ಯತ್ನಿಸಿದ್ದೆ. ಕುಟುಂಬದವರ ಸಹಕಾರ, ಬೆಂಬಲದಿಂದ ಮಾನಸಿಕವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ನನ್ನನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. 10 ಮಂದಿ ನನ್ನನ್ನು ಬಲವಂತವಾಗಿ ದುರುಪಯೋಗಪಡಿಸಿಕೊಂಡಿದ್ದು, ಅವರ ವಿರುದ್ಧ ಕೇಸ್ ದಾಖಲಿಸುವುದಾಗಿ ನಟಿ ಹೇಳಿದ್ದಾರೆ.

ಕೇಸ್ ದಾಖಲಿಸಿದ ಬಳಿಕ ಮಾಧ್ಯಮಗಳ ಎದುರು ಎಲ್ಲವನ್ನೂ ಬಹಿರಂಗಪಡಿಸುತ್ತೇನೆ. ನನಗೆ ಧೈರ್ಯ ಹೇಳಿ ಬೆಂಬಲವಾಗಿ ನಿಂತ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...