alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀದೇವಿ ಸಾವಿಗೆ ಇದೇ ಕಾರಣವಾಯ್ತಾ…? ಶುರುವಾಗಿದೆ ಚರ್ಚೆ

ಬಹುಭಾಷಾ ನಟಿ ಶ್ರೀದೇವಿ ಅವರ ಅಕಾಲಿಕ ನಿಧನ ಚಿತ್ರರಂಗಕ್ಕೆ, ಅಭಿಮಾನಿಗಳಿಗೆ ಆಘಾತ ತಂದಿದೆ. ಇದೇ ವೇಳೆ ಶ್ರೀದೇವಿ ಅವರ ಸಾವಿನ ಕುರಿತಾಗಿಯೂ ಭಾರೀ ಚರ್ಚೆಯಾಗ್ತಿದೆ.

ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಹಾರ್ಟ್ ಅಟ್ಯಾಕ್ ಆಗುವುದು ಕಡಿಮೆ. ಅದರಲ್ಲಿಯೂ ಸದೃಢ ಆರೋಗ್ಯವನ್ನು ಹೊಂದಿರುವ ಮತ್ತು ಆರೋಗ್ಯ, ಸೌಂದರ್ಯದ ಕುರಿತಾಗಿ ಕಾಳಜಿ ವಹಿಸುವ ಶ್ರೀದೇವಿ ಅವರು ಕಿರಿಯ ವಯಸ್ಸಲ್ಲೇ ನಿಧನರಾಗಿರುವುದು ಚರ್ಚೆಗೆ ಕಾರಣವಾಗಿದೆ.

15 ವರ್ಷಗಳ ಗ್ಯಾಪ್ ಬಳಿಕ ಚಿತ್ರರಂಗಕ್ಕೆ ಮರು ಎಂಟ್ರಿ ಪಡೆದ ಶ್ರೀದೇವಿ ‘ಇಂಗ್ಲಿಷ್ –ವಿಂಗ್ಲೀಷ್’ ಮೂಲಕ ಮತ್ತೆ ಮಿಂಚಿದ್ದರು. ‘ಮಾಮ್’ ಅವರು ನಟಿಸಿದ ಕೊನೆ ಚಿತ್ರವಾಗಿದೆ. ಇದು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುವ ಬಗ್ಗೆ ಅವರು ತಯಾರಿ ನಡೆಸಿದ್ದರು.

ಇದಕ್ಕಾಗಿ ಮಾಡಿದ ಅತಿಯಾದ ಡಯಟ್, ಸೌಂದರ್ಯ ಪ್ರಜ್ಞೆ ಅವರ ಮೇಲೆ ಪರಿಣಾಮ ಬೀರಿರಬಹುದಾಗಿದೆ. ಹಿಂದೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದ ಅವರು, ಚಿತ್ರರಂಗದಲ್ಲಿ ಮತ್ತೆ ಮಿಂಚಬೇಕೆಂಬ ಕಾರಣದಿಂದ ಇನ್ನಷ್ಟು ತೆಳ್ಳಗೆ ಗ್ಲಾಮರಸ್ ಆಗಿ ಕಾಣಲು ಪ್ರಯತ್ನಿಸಿದ್ದರು. ಅತಿಯಾದ ಡಯಟ್, ವರ್ಕೌಟ್ ಕೂಡ ಅವರ ಸಾವಿಗೆ ಕಾರಣವಿರಬಹುದೆಂದು ಚರ್ಚೆಯಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...