alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಸಿಗೆ ಹಂಚಿಕೊಳ್ಳುವವರಿಗೆ ಚಾನ್ಸ್, ನಟಿಯೇ ಹೇಳಿದ ರಹಸ್ಯ

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಕುರಿತಾಗಿ ಆಗಾಗ ಮಾತುಗಳು ಕೇಳಿ ಬರುತ್ತವೆ. ಇತ್ತೀಚೆಗಷ್ಟೇ ನಟಿ ಶ್ರುತಿ ಹರಿಹರನ್ ಅವರು ಚಿತ್ರರಂಗದಲ್ಲಿ ತಮಗೆ ಆದ ಅನುಭವಗಳ ಕುರಿತಾಗಿ ಮಾತನಾಡಿದ್ದರು.

ಈಗ ಟಾಲಿವುಡ್ ನಟಿ ಶ್ರೀರೆಡ್ಡಿ ಚಿತ್ರರಂಗದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತಾಗಿ ಹೇಳಿಕೆ ನೀಡಿದ್ದಾರೆ. ‘ನೇನು ನಾನಾ ಅಪದ್ಧಂ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಶ್ರೀರೆಡ್ಡಿ, ಮಂಚ ಹಂಚಿಕೊಳ್ಳಲು ಸಿದ್ಧವಿರುವವರಿಗೆ ಮಾತ್ರ ಚಾನ್ಸ್ ಕೊಡಲಾಗ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ನಮಗೂ ಒಂದು ಅವಕಾಶ ಕೊಡಿ, ನಮ್ಮ ಪ್ರತಿಭೆಯನ್ನು ತೋರಿಸುತ್ತೇವೆ. ತೆಲುಗಿನ ನಟಿಯರು ಹಾಸಿಗೆ ಹಂಚಿಕೊಳ್ಳಲು ನಿರಾಕರಿಸುವ ಕಾರಣಕ್ಕೆ ಬೇರೆ ಭಾಷೆಗಳ ನಟಿಯರನ್ನು ಕರೆತರಲಾಗ್ತಿದೆ ಎಂದು ಟೀಕಿಸಿದ್ದಾರೆ. ಟಾಲಿವುಡ್ ನಲ್ಲಿ ಹೊರಗಿನವರಿಗೇ ಮಣೆ ಹಾಕಲಾಗ್ತಿದೆ. ಕನ್ನಡ, ತಮಿಳು, ಹಿಂದಿ ಭಾಷೆಯ ನಟಿಯರಿಗೆ ಚಾನ್ಸ್ ಸಿಗ್ತಿವೆ. ತೆಲುಗು ನಾಡಿನಲ್ಲಿ ಹೆಣ್ಣುಮಕ್ಕಳನ್ನು ಚಿತ್ರರಂಗಕ್ಕೆ ಕಳಿಸಲು ಪೋಷಕರು ಹೆದರುವ ಪರಿಸ್ಥಿತಿ ಇದೆ ಎಂದು ಹೇಳಿದ್ದಾರೆ.

ಟಾಲಿವುಡ್ ನಲ್ಲಿ ಲೈಂಗಿಕ ಕಿರುಕುಳ ಕುರಿತಾಗಿ ಶ್ರೀರೆಡ್ಡಿ ನೀಡಿರುವ ಹೇಳಿಕೆ ಹಲ್ ಚಲ್ ಎಬ್ಬಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...