alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ರೇಖಾ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ…?

rekha20

ಬಾಲಿವುಡ್ ನ ಖ್ಯಾತ ತಾರೆ ರೇಖಾ ಚಿರಯೌವನೆ. ಈಗಲೂ ಕೋಟ್ಯಾಂತರ ಅಭಿಮಾನಿಗಳಲ್ಲಿ ನೆಲೆಯೂರಿರುವ ಬಾಲಿವುಡ್ ನ ಅತ್ಯುತ್ತಮ ನಟಿ. ಹುಡುಗರಿಂದ ಹಿಡಿದು ಮುದುಕರವರೆಗೆ ಈಗಲೂ ರೇಖಾಳನ್ನು ಪ್ರೀತಿಸುವವರಿದ್ದಾರೆ. ಆದ್ರೆ ರೇಖಾಗೆ ಮಾತ್ರ ಬಯಸಿದ ಪ್ರೀತಿ ಸಿಗಲಿಲ್ಲ.

ಅಮಿತಾಬ್ ಬಚ್ಚನ್ ಪ್ರೀತಿಯೂ ರೇಖಾಗೆ ಸಿಗಲಿಲ್ಲ. ಪತಿ ಮುಖೇಶ್ ಅಗರ್ವಾಲ್ ಕೂಡ ರೇಖಾ ಜೊತೆ ಬಾಳ್ವೆ ಮಾಡಲಿಲ್ಲ. ‘ಗಂಗಾ ಕಿ ಸೌಗಂಧ್’ ಚಿತ್ರದ ಮೂಲಕ ರೇಖಾ ಹಾಗೂ ಬಿಗ್ ಬಿ ಬಹಳ ಹತ್ತಿರಕ್ಕೆ ಬಂದಿದ್ದರು. ತೆರೆ ಮೇಲೆ ಈ ಜೋಡಿಯನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದರು. ಈ ಜೋಡಿ ಮಾಡಿದ ಎಲ್ಲ ಚಿತ್ರಗಳೂ ಹಿಟ್ ಆದ್ವು. ರೀಲ್ ಲೈಫ್ ನಲ್ಲಿ ಒಂದಾಗಿದ್ದ ಜೋಡಿ ರಿಯಲ್ ಲೈಫ್ ನಲ್ಲೂ ಹತ್ತಿರವಾಗತೊಡಗಿದ್ರು.

ಅಮಿತಾಬ್ ಬಚ್ಚನ್ ಹಾಗೂ ರೇಖಾ ಲವ್ ಸ್ಟೋರಿಯೇ ಆಗಿನ ಕಾಲದ ಹೆಡ್ ಲೈನ್ ಆಗಲು ಶುರುವಾಯ್ತು. ಇದು ಅಮಿತಾಬ್ ಮಡದಿ ಜಯಾ ಬಚ್ಚನ್ ಗೂ ಕೇಳಿಸ್ತು. ಮನೆಯಲ್ಲಿ ಗಲಾಟೆ ಶುರುವಾಯ್ತು. ಆಗ ಸದ್ದಿಲ್ಲದೆ ಅಮಿತಾಬ್, ರೇಖಾಳಿಂದ ದೂರ ಸರಿದ್ರು.

ಅಮಿತಾಬ್ ಪ್ರೀತಿಯಿಂದ ವಂಚಿತಳಾಗಿದ್ದ ರೇಖಾಗೆ ಸಿಕ್ಕಿದ್ದು ಮುಖೇಶ್ ಅಗರ್ವಾಲ್. ರೇಖಾ ಹಾಗೂ ಮುಖೇಶ್ ಒಟ್ಟಿಗಿರುವ ಫೋಟೋ ನೋಡಿ ರೇಖಾ ಕಳೆದುಕೊಂಡ ಪ್ರೀತಿ ಮತ್ತೆ ಸಿಗ್ತು ಅಂತಾ ಮಾತಾಡಿಕೊಂಡ್ರು ಜನ. ಅಂದುಕೊಂಡಂತೆ ರೇಖಾ 1990ರಲ್ಲಿ ಮುಖೇಶ್ ಜೊತೆ ಹೊಸ ಬಾಳಿಗೆ ಅಡಿಯಿಟ್ಟರು. ಆದ್ರೆ ರೇಖಾಗೆ ಮುಖೇಶ್ ಪ್ರೀತಿ ಕೂಡ ತುಂಬಾ ದಿನ ಸಿಗಲಿಲ್ಲ. 1991ರಲ್ಲಿ ಮುಖೇಶ್ ನೇಣಿಗೆ ಶರಣಾದ್ರು.

ರೇಖಾ ದುಪಟ್ಟಾದಲ್ಲಿಯೇ ಮುಖೇಶ್ ನೇಣು ಬಿಗಿದುಕೊಂಡಿದ್ದಾರೆಂಬ ಸುದ್ದಿ ಕೂಡ ಹರಡಿತ್ತು. ರೇಖಾ, ಮುಖೇಶ್ ಹಿಂದೆ ಬಿದ್ದು ಮದುವೆಯಾಗಿದ್ದರು ಎಂಬ ಮಾತುಗಳೂ ಕೇಳಿ ಬಂದ್ವು. ಮುಖೇಶ್ ಅನಾರೋಗ್ಯದಿಂದ ಬಳಲ್ತಾ ಇದ್ದರು. ಹಾಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನುವ ಸುದ್ದಿಯೂ ಹರಡಿತ್ತು. ಆದ್ರೆ ಕಾರಣ ಏನೆಂಬುದು ಈವರೆಗೂ ತಿಳಿಯಲಿಲ್ಲ.

ಇಬ್ಬರ ಪ್ರೀತಿಯಿಂದ ವಂಚಿತವಾಗಿ, ಗಂಡನನ್ನು ಕಳೆದುಕೊಂಡಿದ್ದರೂ ರೇಖಾ ಮಾತ್ರ ಈವರೆಗೂ ಹಣೆಯಲ್ಲಿ ಸಿಂಧೂರವನ್ನಿಡ್ತಾರೆ. ಬಿಗ್ ಬಿ ಹೆಸರಿನಲ್ಲಿ ಈ ಸಿಂಧೂರವನ್ನಿಡ್ತಾರೆ ಎಂಬ ಸುದ್ದಿ ಕೂಡ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...