alex Certify
ಕನ್ನಡ ದುನಿಯಾ       Mobile App
       

Kannada Duniya

ಆಂಟಿಕ್ ಜ್ಯುವೆಲ್ಲರಿಗಳಲ್ಲಿ ಮಿಂಚಿದ ರಾಧಿಕಾ ಕುಮಾರಸ್ವಾಮಿ

ಬೆಂಗಳೂರು: ಜ್ಯುವೆಲ್ಸ್ ಆಫ್ ಇಂಡಿಯಾ ರಾಯಭಾರಿಯಾಗಿರುವ ನಟಿ ರಾಧಿಕಾ ಕುಮಾರಸ್ವಾಮಿ, ಗಣೇಶ ಹಬ್ಬದ ಪ್ರಯುಕ್ತ ಲಾಂಚ್ ಆಗಿರುವ ನವೀನ ವಿನ್ಯಾಸದ ಆಭರಣಗಳನ್ನ ಪರಿಚಯಿಸಿ, ಗಮನ ಸೆಳೆದಿದ್ದಾರೆ.

ಡಾಲರ್ಸ್ ಕಾಲೋನಿಯ ರಾಧಿಕಾ ಮನೆಯಲ್ಲಿ ನಡೆದ ಈ ಆಭರಣಗಳ ಪ್ರದ್ರಶನದಲ್ಲಿ, ರಾಧಿಕಾ ಸಾಂಪ್ರದಾಯಿಕ ಹಾಗೂ ವಿಶೇಷ ಬಗೆಯ ವಿನ್ಯಾಸಗಳುಳ್ಳ ಭರ್ಜರಿ ಆಭರಣ, ರೇಷ್ಮೆ ಸೀರೆಗಳಲ್ಲಿ ಮಿಂಚಿದರು. ಇದೇ ವೇಳೆ ಫೋಟೋ ಶೂಟ್ ಕೂಡ ಮಾಡಿಸಿರುವ ರಾಧಿಕಾ ವಿಶೇಷ ವಿನ್ಯಾಸಗಳ ಆಂಟಿಕ್ ಜ್ಯುವೆಲ್ಲರಿ ಧರಿಸಿ ಕಂಗೊಳಿಸಿದ್ದಾರೆ.

ಇದೇ ವೇಳೆ ತಮ್ಮ ಸಿನಿಮಾ ಜೀವನ ಹಾಗೂ ಬ್ಯೂಟಿ ಸೀಕ್ರೇಟ್ ಗಳನ್ನು ತೆರೆದಿಟ್ಟ ರಾಧಿಕಾ ತಾವು ಯಾವಾಗಲೂ ಟೆನ್ ಶನ್ ಇಲ್ಲದೇ ನಿಶ್ಚಿಂತೆಯಿಂದ ಇರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಹೆಚ್ಚಾಗಿ ತಮ್ಮ ಸಿನಿಮಾ ಪ್ರಾಜೆಕ್ಟ್ ಹಾಗೂ ಕುಟುಂಬದ ಜತೆ ಕಾಲ ಕಳೆಯುತ್ತೇನೆ. ತುಂಬಾ ಕಡಿಮೆ ಟೆನ್ ಶನ್ ಮಾಡಿಕೊಳ್ಳುವುದೇ ತಮ್ಮ ಸೌಂದರ್ಯದ ಗುಟ್ಟಿರಬಹುದು ಎಂದಿದ್ದಾರೆ.

ಇನ್ನು ತಮ್ಮ ಬ್ಯಾನರ್ ಅಡಿಯಲ್ಲಿ `ಭೈರಾದೇವಿ’ ಸಿನಿಮಾ ಮೂರು ಭಾಷೆಯಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಸಧ್ಯಕ್ಕೆ ಶೂಟಿಂಗ್ ನಡೆಯುತ್ತಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಶಿವಣ್ಣನ ಜತೆ ಒಂದು ಸಿನಿಮಾ ಮಾಡುತ್ತಿರುವುದಾಗಿ ರಾಧಿಕಾ ತಿಳಿಸಿದ್ದಾರೆ. ಈಗಾಗಲೇ ಸಿನಿಮಾ ಶುರುವಾಗಬೇಕಿತ್ತು. ಆದರೆ ಇಬ್ಬರೂ ಬ್ಯುಸಿ ಇರುವುದರಿಂದ ಕೊಂಚ ತಡವಾಗಿದೆ. ಶೀಘ್ರದಲ್ಲಿಯೇ ಇಬ್ಬರು ಒಟ್ಟಾಗಿ ಅಭಿನಯಿಸುತ್ತೇವೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...