alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿಯ ಸಾವಿಗೆ ಕಾರಣವಾಯ್ತಾ ‘ಲವ್, ಸೆಕ್ಸ್ ಔರ್ ಧೋಕಾ’..?

pratyusha banerjee image‘ಬಾಲಿಕಾ ವಧು’ ಖ್ಯಾತಿಯ ಕಿರುತೆರೆ ನಟಿ ಪ್ರತ್ಯುಷಾ ಬ್ಯಾನರ್ಜಿ ನಿಗೂಢ ಸಾವಿನ ಪ್ರಕರಣ ಈಗ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಆಕೆಯ ಬಾಯ್ ಫ್ರೆಂಡ್ ನಟ, ನಿರ್ಮಾಪಕ ರಾಹುಲ್ ರಾಜ್ ಸಿಂಗ್ ಮಾಡಿದ ವಂಚನೆಯಿಂದಾಗಿಯೇ ನಟಿ ಆತ್ಮಹತ್ಯೆಯಂತಹ ಕಠೋರ ನಿರ್ಧಾರ ಕೈಗೊಳ್ಳಲು ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹೋಳಿ ಹಬ್ಬದ ಸಂದರ್ಭದಲ್ಲಿ ಬಾಲಿವುಡ್ ನ ಖ್ಯಾತ ಡಿಸೈನರ್ ಒಬ್ಬರ ಬಳಿ ತನ್ನ ಮದುವೆಯ ವಸ್ತ್ರವನ್ನು ಸಿದ್ದಪಡಿಸುವಂತೆ ಕೋರಿದ್ದ ಪ್ರತ್ಯುಷಾ, ನಂತರ ತನ್ನ ಬಾಯ್ ಫ್ರೆಂಡ್ ರಾಹುಲ್ ರಾಜ್ ಸಿಂಗ್ ಗೆ ಮತ್ತೊಬ್ಬಳೊಂದಿಗೆ ಸಂಬಂಧವಿದೆ ಎಂಬ ವಿಷಯ ಅರಿತು ಶಾಕ್ ಆಗಿದ್ದಳೆನ್ನಲಾಗಿದೆ.

ಈ ಕಾರಣಕ್ಕಾಗಿ ಇಬ್ಬರ ಮಧ್ಯೆ ಪದೇ ಪದೇ ಜಗಳವಾಗುತ್ತಿದ್ದು, ನೇಣಿಗೆ ಕೊರಳೊಡ್ಡಿದ ದಿನದಂದು ಬೆಳಿಗ್ಗೆ ಲಿಫ್ಟ್ ನಲ್ಲಿ ಆಕೆಯನ್ನು ನೋಡಿದ ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ ಕಣ್ಣೀರಿಡುತ್ತಿದ್ದಳೆನ್ನಲಾಗಿದೆ. ಪ್ರತ್ಯುಷಾ ಶವದ ಮರಣೋತ್ತರ ಪರೀಕ್ಷೆ ಬಳಿಕ ಮುಂಬೈನ ಓಹೀಶ್ವರ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಈ ಸಂದರ್ಭದಲ್ಲಿ ಆಪಾರ ಸಂಖ್ಯೆಯಲ್ಲಿ ಸ್ನೇಹಿತರು ನೆರೆದಿದ್ದರು. ರಾಹುಲ್ ರಾಜ್ ಜೊತೆ ಒಂದು ಸುತ್ತಿನ ವಿಚಾರಣೆ ನಡೆಸಿರುವ ಪೊಲೀಸರು ಅಗತ್ಯ ಬಿದ್ದಲ್ಲಿ ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...