alex Certify
ಕನ್ನಡ ದುನಿಯಾ       Mobile App
       

Kannada Duniya

ಬಂಗೀ ಜಂಪ್ ವೇಳೆ ಯಡವಟ್ಟು, ಗಂಭೀರ ಸ್ಥಿತಿಯಲ್ಲಿ ನಟಿ

ಫೆಮಿನಾ ಮಿಸ್ ಇಂಡಿಯಾ ಬೆಡಗಿ ಹಾಗೂ ಬಾಲಿವುಡ್ ನಟಿ ನತಾಷಾ ಸುರಿ ಬಂಗೀ ಜಂಪ್ ವೇಳೆ ಆಯತಪ್ಪಿ ಬಿದ್ದಿದ್ದು, ಗಂಭೀರ ಸ್ಥಿತಿಗೆ ತಲುಪಿದ್ದಾರೆ.

ಇಂಡೋನೇಷ್ಯಾದಲ್ಲಿ ನಡೆದ ಲಗ್ಸುರಿ ಮಳಿಗೆಯೊಂದರ ಉದ್ಘಾಟನಾ ಕಾರ್ಯಕ್ರಮದಲ್ಲಿ ನತಾಷಾ ಸುರಿ ಭಾಗವಹಿಸಿದ್ದ ಅವರು, ನಂತರ ಸಾಹಸ ಕ್ರೀಡೆಗಳಲ್ಲಿ ಭಾಗಿಯಾಗಿದ್ದಾರೆ. ಬಂಗೀ ಜಂಪ್ ಮಾಡುವ ಸಂದರ್ಭದಲ್ಲಿ ಅವರು ಎತ್ತರದಿಂದ ಹಾರಿದ್ದು, ಅವರು ಕಟ್ಟಿಕೊಂಡಿದ್ದ ಹಗ್ಗ ತುಂಡಾಗಿ ಆಳದ ಕಂದಕಕ್ಕೆ ಬಿದ್ದಿದ್ದಾರೆ.

ಕೆಳಗೆ ಬಿದ್ದ ಕಾರಣ ಅವರಿಗೆ ತೀವ್ರವಾದ ಪೆಟ್ಟಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೀಗಿದ್ದರೂ, 24 ಗಂಟೆಗಳ ನಂತರವಷ್ಟೇ ಅವರ ಚೇತರಿಕೆ ಸ್ಥಿತಿಯನ್ನು ತಿಳಿಸಬಹುದು ಎಂದು ವೈದ್ಯರು ಹೇಳಿದ್ದಾರೆ.

2006 ರ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಟಾಪ್ 10 ರಲ್ಲಿ ಸ್ಥಾನ ಪಡೆದಿದ್ದ ನತಾಷಾ ಮಲಯಾಳಿ ಚಿತ್ರ ‘ಕಿಂಗ್ ಲಯನ್’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕಾರ್ಯಕ್ರಮಗಳ ನಿರೂಪಕಿಯಾಗಿಯೂ ಅವರು ಗಮನಸೆಳೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...