alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಜು ಯಶಸ್ಸಿನ ನಂತ್ರವೂ ಬಯೋಪಿಕ್ ಚಿತ್ರ ಬೇಡ ಎಂದ್ಲು ಈ ನಟಿ…!

ಬಾಲಿವುಡ್ ನಲ್ಲಿ ಸಂಜಯ್ ದತ್ ಬಯೋಪಿಕ್ ಚಿತ್ರ ‘ಸಂಜು’ ಭರ್ಜರಿ ಯಶಸ್ಸು ಕಾಣ್ತಿದೆ. ಮೊದಲ ದಿನವೇ 34 ಕೋಟಿ ಗಳಿಕೆ ಕಂಡು ದಾಖಲೆ ಬರೆದಿರುವ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಸಂಜು ಚಿತ್ರಕ್ಕೆ ಇಷ್ಟು ಪ್ರತಿಕ್ರಿಯೆ ಸಿಕ್ಕರೂ ಬಾಲಿವುಡ್ ನಟಿ ಕಾಜೋಲ್ ಮಾತ್ರ ಬಯೋಪಿಕ್ ಚಿತ್ರ ಬೇಡ ಎನ್ನುತ್ತಿದ್ದಾಳೆ.

ಮುಂಬೈನಲ್ಲಿ ನಡೆದ ಐಕಾನಿಕ್ ಬ್ರಾಂಡ್ ಅವಾರ್ಡ್ ಕಾರ್ಯಕ್ರಮಕ್ಕೆ ಬಂದಿದ್ದ ಕಾಜೋಲ್ ನನ್ನ ಜೀವನಚರಿತ್ರೆ ಸಿನಿಮಾ ಆಗೋದು ಬೇಡ ಎಂದಿದ್ದಾಳೆ. ನನಗಿಷ್ಟದಂತೆ ನಾನು ನನ್ನ ಜೀವನ ಕಳೆದಿದ್ದೇನೆ. ನನಗೆ ಇದ್ರಲ್ಲಿ ತುಂಬಾ ಖುಷಿಯಿದೆ. ಇದು ಸಿನಿಮಾ ಆಗೋದು ನನಗೆ ಇಷ್ಟವಿಲ್ಲವೆಂದು ಕಾಜೋಲ್ ಹೇಳಿದ್ದಾಳೆ.

1992 ರಲ್ಲಿ ಬೇಕುದಿ ಚಿತ್ರದ ಮೂಲಕ ಬಾಲಿವುಡ್ ಗೆ ಪ್ರವೇಶ ಮಾಡಿದ ಕಾಜೋಲ್, ದಿಲ್ವಾಲೆ ದುಲನಿಯಾ ಲೇ ಜಾಯೇಂಗೆ, ಕುಚ್ ಕುಚ್ ಹೋತಾಹೇ, ಕಬಿ ಖುಷಿ ಕಬಿ ಗಂ ಸೇರಿದಂತೆ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದು, ತನ್ನ ಜೀವನಚರಿತ್ರೆ ಸಿನಿಮಾ ಆಗೋದು ಇಷ್ಟವಿಲ್ಲವಂತೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...