alex Certify
ಕನ್ನಡ ದುನಿಯಾ       Mobile App
       

Kannada Duniya

6ನೇ ವಯಸ್ಸಿನಲ್ಲಿಯೇ ಅತ್ಯಾಚಾರಕ್ಕೊಳಗಾಗಿದ್ರು ಈ ನಟಿ

ಟಿವಿ ಹಾಗೂ ಸಿನಿಮಾ ಜಗತ್ತಿನಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿರುವ ಹಿರಿಯ ನಟಿ ಡೈಸಿ ಇರಾನಿ ತಮ್ಮ ಜೀವನದ ಕಠು ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಡೈಸಿ ಮಾತು ಕೇಳಿ ಇಡೀ ಬಾಲಿವುಡ್ ಗಾಬರಿಗೊಂಡಿದೆ. 1950ರ ವೇಳೆಗೆ ಬಾಲ ನಟಿಯಾಗಿ ಡೈಸಿ ಬಾಲಿವುಡ್ ಗೆ ಪ್ರವೇಶ ಮಾಡಿದ್ದರು. ಗುಂಗುರು ಕೂದಲು ಹಾಗೂ ದೊಡ್ಡ ಕಣ್ಣು ಪ್ರೇಕ್ಷಕರನ್ನು ಆಕರ್ಷಿಸಿತ್ತು.

ಮಿ ಟೂ ಕ್ಯಾಂಪೇನ್ ಮೂಲಕ ಅನೇಕ ನಟಿಯರು ಕೂಡ ತಮ್ಮ ಮೇಲಾದ ಲೈಂಗಿಕ ಶೋಷಣೆಯನ್ನು ಬಹಿರಂಗಪಡಿಸುತ್ತಿದ್ದಾರೆ. ಇದೇ ಸಾಲಿಗೆ ಡೈಸಿ ಕೂಡ ಸೇರಿದ್ದಾರೆ. ಡೈಸಿ ತಮ್ಮ ಮೇಲಾದ ಲೈಂಗಿಕ ಶೋಷಣೆಯನ್ನು ಎಲ್ಲರ ಮುಂದಿಟ್ಟಿದ್ದಾರೆ.

67 ವರ್ಷದ ಡೈಸಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾನು 6 ವರ್ಷದಲ್ಲಿದ್ದಾಗಲೇ ಅತ್ಯಾಚಾರಕ್ಕೊಳಗಾಗಿದ್ದೆ ಎಂದಿದ್ದಾರೆ. ಈ ವೇಳೆ ಡೈಸಿ ಹಮ್ ಪಂಚಿ ಏಕ್ ಡಾಲ್ ಕೆ ಚಿತ್ರದ ಶೂಟಿಂಗ್ ಗಾಗಿ ಚೆನ್ನೈನಲ್ಲಿದ್ದರಂತೆ. ಅತ್ಯಾಚಾರವೆಸಗಿದ ವ್ಯಕ್ತಿ ನನಗೆ ಪರಿಚಿತನಾಗಿದ್ದ. ಹೊಟೇಲ್ ಗೆ ಕರೆದೊಯ್ದು ಬೆಲ್ಟ್ ನಲ್ಲಿ ಹೊಡೆದ. ಈ ಬಗ್ಗೆ ಬಾಯಿಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಸಿದ ಎಂದು ಡೈಸಿ ಹೇಳಿದ್ದಾರೆ.

ಆ ನೋವನ್ನು ಈಗ್ಲೂ ನನ್ನಿಂದ ಮರೆಯಲು ಸಾಧ್ಯವಾಗಿಲ್ಲ. ಆರೋಪಿ ಈಗಿಲ್ಲ. ಆಗಿನ ಕಾಲದಲ್ಲಿ ಉದ್ಯಮದಲ್ಲಿ ಬಹಳಷ್ಟು ಹೆಸರು ಮಾಡಿದ್ದ ವ್ಯಕ್ತಿಯಾಗಿದ್ದ ಆತ ಎಂದು ಡೈಸಿ ಹೇಳಿದ್ದಾರೆ. ತಾಯಿ ಬಳಿಯೂ ಈ ಬಗ್ಗೆ ನಾನು ಹೇಳಿಲ್ಲ. ತಾಯಿ ನನಗೆ ಹೊಸ ಚಿತ್ರದಲ್ಲಿ ಅವಕಾಶ ಸಿಗಲಿ ಎಂದು ಬಯಸುತ್ತಿದ್ದರು. ಅದಕ್ಕಾಗಿ 15ನೇ ವಯಸ್ಸಿನಲ್ಲಿಯೇ ಸೀರೆ ಉಡಿಸಿ ನಿರ್ಮಾಪಕರ ಬಳಿ ಕಳುಹಿಸಿದ್ದಳು. ಆದ್ರೆ ಆ ನಿರ್ಮಾಪಕ ಕೂಡ ಕೆಟ್ಟದಾಗಿ ನಡೆದುಕೊಳ್ಳಲು ಮುಂದಾಗಿದ್ದ. ಅಲ್ಲಿಂದ ನಾನು ಓಡಿ ಬಂದಿದ್ದೆ ಎಂದು ಡೈಸಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...