alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನಸಿಕ ಒತ್ತಡದಲ್ಲಿದ್ದ ನಟಿ ಆತ್ಮಹತ್ಯೆ

ಸಿನಿ ಜಗತ್ತಿನಲ್ಲಿ ಉಜ್ವಲ ಭವಿಷ್ಯದ ಕನಸು ಕಾಣ್ತಿದ್ದ ನಟಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೋಲ್ಕತ್ತಾದ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಟಿವಿ ನಟಿಯ ಶವ ಪತ್ತೆಯಾಗಿದೆ.

ಮೌಮಿತಾ ಸಾಹಾ ಆತ್ಮಹತ್ಯೆಗೆ ಶರಣಾದ ನಟಿ. ಟಿವಿ ಜಗತ್ತಿನಲ್ಲಿ ಕೆಲಸ ಮಾಡಿರುವ ಮೌಮಿತಾ ಆತ್ಮಹತ್ಯೆಗೆ ಮಾನಸಿಕ ಒತ್ತಡ ಕಾರಣ ಎನ್ನಲಾಗ್ತಿದೆ. ಕೋಲ್ಕತ್ತಾದ ಅಶೋಕ ನಗರದ  ಬಾಡಿಗೆ ಮನೆಯಲ್ಲಿ ಮೌಮಿತಾ ವಾಸವಾಗಿದ್ದಳು. ಶುಕ್ರವಾರ ಬೆಳಿಗ್ಗೆ 10 ಗಂಟೆ ನಂತ್ರ ಮೌಮಿತಾ ಫೋನ್ ತೆಗೆದುಕೊಂಡಿರಲಿಲ್ಲ.

ಕುಟುಂಬಸ್ಥರು ನಿರಂತರವಾಗಿ ಮೌಮಿತಾಗೆ ಕರೆ ಮಾಡಿದ್ದಾರೆ. ಆದ್ರೆ ಈಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದ್ರಿಂದ ಅನುಮಾನಗೊಂಡ ಪಾಲಕರು ಮನೆ ಮಾಲೀಕನಿಗೆ ತಿಳಿಸಿದ್ದಾರೆ. ಮನೆ ಮಾಲೀಕ ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೌಮಿತಾ ಸಿಕ್ಕಿದ್ದಾಳೆ.

ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಮೌಮಿತಾ ಅನೇಕ ದಿನಗಳಿಂದ ಬಾಲಿವುಡ್ ಗೆ ಎಂಟ್ರಿಯಾಗುವ ಪ್ರಯತ್ನದಲ್ಲಿದ್ದಳು. ಆದ್ರೆ ಯಾವುದೇ ಕೆಲಸ ಸಿಕ್ಕಿರಲಿಲ್ಲ. ಇದ್ರಿಂದ ಒತ್ತಡಕ್ಕೊಳಗಾಗಿದ್ದ ಮೌಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...