alex Certify
ಕನ್ನಡ ದುನಿಯಾ       Mobile App
       

Kannada Duniya

ಖಾಸಗಿ ಫೋಟೋ ವೈರಲ್ ಆದ್ಮೇಲೆ ನಟಿ ಹೇಳಿದ್ದೇನು?

ಕೆಲವು ದಿನಗಳ ಹಿಂದೆ ಸೂಪರ್ ಸ್ಟಾರ್ ಕಮಲ್ ಹಾಸನ್ ಮಗಳು ಅಕ್ಷರಾ ಹಾಸನ್ ಖಾಸಗಿ ಫೋಟೋಗಳು ವೈರಲ್ ಆಗಿವೆ. ಈಗ ಅಕ್ಷರಾ ಮುಂಬೈ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಘಟನೆ ನಂತ್ರ ಅಕ್ಷರಾ ಹಾಸನ್ ಘಟನೆಯಿಂದ ಆಘಾತಕ್ಕೊಳಗಾಗಿದ್ದಾಳಂತೆ.

ಘಟನೆ ಬಗ್ಗೆ ಅಕ್ಷರಾ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾಳೆ. ಇದು ತುಂಬಾ ದುರಾದೃಷ್ಟಕರ ಎಂದು ಅಕ್ಷರಾ  ಟ್ವೀಟ್ ಮಾಡಿದ್ದಾಳೆ. ಘಟನೆ ನಂತ್ರ ತುಂಬಾ ಆಘಾತಕ್ಕೊಳಗಾಗಿದ್ದೇನೆ. ವಿಕೃತ ಮನುಷ್ಯರು ಮಾತ್ರ ಮಹಿಳೆಯ ಖಾಸಗಿ ಫೋಟೋ ವೈರಲ್ ಮಾಡಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಮೀಟೂ ಕ್ಯಾಂಪೇನ್ ನಡೆಯುತ್ತಿದೆ. ಈ ಮಧ್ಯೆ ಕಾಮುಕರು ಖಾಸಗಿ ಫೋಟೋಗಳನ್ನು ವೈರಲ್ ಮಾಡಿ ಕಣ್ಣು ತಂಪು ಮಾಡಿಕೊಳ್ತಿದ್ದಾರೆಂದು ಅಕ್ಷರಾ ಹೇಳಿದ್ದಾಳೆ.

ಮುಂಬೈನ ಸೈಬರ್ ಕ್ರೈಂ ಬ್ರಾಂಚ್ ನಲ್ಲಿ ದೂರು ನೀಡಿದ್ದೇನೆ. ಯಾರು ನನ್ನ ಖಾಸಗಿ ಫೋಟೋ ವೈರಲ್ ಮಾಡಿದ್ದಾರೆಂಬುದು ಗೊತ್ತಿಲ್ಲ. ಬೇರೆ ಬೇರೆ ಶೀರ್ಷಿಕೆಯಲ್ಲಿ ಫೋಟೋ ವೈರಲ್ ಮಾಡ್ತಿದ್ದಾರೆ. ಇದು ಮತ್ತಷ್ಟು ಆಘಾತ, ನೋವು ನೀಡಿದೆ ಎಂದು ಅಕ್ಷರಾ ಹೇಳಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...