alex Certify
ಕನ್ನಡ ದುನಿಯಾ       Mobile App
       

Kannada Duniya

ಚಿತ್ರದ ಪ್ರಮೋಷನ್ ಗೆ ಇವರು ಮಾಡಿದ್ದೇನು ಗೊತ್ತಾ…?

ಹೊಸ ಚಿತ್ರಗಳು ತೆರೆಗೆ ಬರುವುದಕ್ಕೂ ಮುನ್ನ, ಅವುಗಳ ಪ್ರಮೋಷನ್ ಗೆ ನಿರ್ದೇಶಕರು, ನಿರ್ಮಾಪಕರು, ನಟರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಪ್ರಮೋಷನ್ ಗಾಗಿ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಾರೆ. ಅಂತೆಯೇ ಇರಾನಿ ಚಿತ್ರ ‘ಡಮಾಸ್ಕಸ್ ಟೈಂ’  ನ ಪ್ರಮೋಷನ್ ಹೇಗೆ ಮಾಡಿದ್ರು ಅಂತಾ ಕೇಳಿದ್ರೆ ನೀವು ದಂಗಾಗಿ ಹೋಗ್ತೀರಾ.

ಇರಾನಿನ ತಂದೆ, ಮಗನನ್ನು ಅಪಹರಿಸಿ ಹೇಗೆ ಸಿರಿಯಾಕ್ಕೆ ಕರೆತರುತ್ತಾರೆ ಎಂಬ ಎಳೆಯನ್ನಿಟ್ಟುಕೊಂಡು ‘ಡಮಾಸ್ಕಸ್ ಟೈಂ’ ಚಿತ್ರವನ್ನ ನಿರ್ಮಿಸಲಾಗಿದೆ. ಈ ಚಿತ್ರದ ಪ್ರಮೋಷನ್ ಗಾಗಿ ನಟ ಉಗ್ರನ ರೀತಿಯಲ್ಲೇ ವೇಷ ಧರಿಸಿ, ಕುದುರೆ ಏರಿ, ನಕಲಿ ಬಂದೂಕುಗಳನ್ನು ಹಿಡಿದು, ಅಲ್ಲಾಹು ಅಕ್ಬರ್ ಎಂದು ಕೂಗುತ್ತಾ ಶಾಪಿಂಗ್ ಮಾಲ್ ಒಂದನ್ನ ಸುತ್ತುವರೆದಿದ್ದಾನೆ.

ಮಾಲ್ ನಲ್ಲಿದ್ದ ವ್ಯಾಪಾರಿಗಳಿಗೆ ಇವರು ಉಗ್ರರಲ್ಲ, ನಟರು ಅಂತಾ ತಿಳಿಯುತ್ತಿದ್ದಂತೆ ಅವರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ರು. ಆದ್ರೆ ಮತ್ತೆ ಕೆಲವರು ಭಯದಿಂದ ಹೆದರಿ ಓಡತೊಡಗಿದ್ರು. ಕಾರಣ, ಕಳೆದ ಜೂನ್ ನಲ್ಲಿ ಐಸಿಸ್ ಉಗ್ರರು ತೆಹರಾನ್ ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿದಾಗ 12 ಮಂದಿ ಸಾವನ್ನಪ್ಪಿ, 40 ಮಂದಿ ಗಂಭೀರವಾಗಿ ಗಾಯಗೊಂಡಿದ್ರು. ಹೀಗಾಗಿ ಇಲ್ಲೂ ಉಗ್ರರು ದಾಳಿ ನಡೆಸಿದ್ದಾರೆ ಎಂದು ಕೆಲವರು ಅಲ್ಲಿಂದ ಓಡಿ ಹೋಗ್ತಿದ್ರು.

ಈ ರೀತಿಯ ಚಿತ್ರದ ಪ್ರಮೋಷನ್ ಗೆ ಇರಾನ್ ನ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ. ಹೀಗಾಗಿ ಚಿತ್ರದ ನಿರ್ದೇಶಕ ಇಬ್ರಾಹಿಂ ಹಾಟಮಿಕಿ ಕ್ಷಮೆ ಯಾಚಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...