alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಯ್ತು ಕಾಮಿಡಿ ಸ್ಟಾರ್ ಚಿಕ್ಕಣ್ಣನ ಮತ್ತೊಂದು ಮುಖ

chikkanna_02715t

ಸ್ಯಾಂಡಲ್ ವುಡ್ ನಲ್ಲಿ ನಾಯಕ ನಟರನ್ನೂ ಮೀರಿಸುವಂತೆ ಬ್ಯುಸಿಯಾಗಿರುವ ಕಾಮಿಡಿ ಸ್ಟಾರ್ ಚಿಕ್ಕಣ್ಣ, ಅಭಿಮಾನಿಗಳ ಅಚ್ಚುಮೆಚ್ಚಿನ ನಟರಲ್ಲಿ ಒಬ್ಬರು. ಅಂತಹ ಜನಪ್ರಿಯ ನಟನ ಮತ್ತೊಂದು ಮುಖ ಅನಾವರಣಗೊಂಡಿದೆ.

ವರ್ಷದ 365 ದಿನಗಳೂ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಕಾಮಿಡಿ ಸ್ಟಾರ್ ಚಿಕ್ಕಣ್ಣ ಹೊಸಬರಿಂದ ಹಿಡಿದು ಸ್ಟಾರ್ ನಟರ ಚಿತ್ರಗಳಿಗೆ ಬೇಕಾದ ನಟರಾಗಿದ್ದಾರೆ. ಇತ್ತೀಚೆಗೆ ‘ಕೋಟಿಗೊಬ್ಬ-2’ ಚಿತ್ರಕ್ಕಾಗಿ ಡೇಟ್ಸ್ ಕೊಟ್ಟಿದ್ದರಾದರೂ, ನಿಗದಿತ ದಿನಾಂಕದೊಳಗೆ ಶೂಟಿಂಗ್ ಮುಗಿಸಲು ಸಾಧ್ಯವಾಗಲಿಲ್ಲ. ಚಿತ್ರತಂಡದ ಬೇಡಿಕೆಯಂತೆ ಹೆಚ್ಚುವರಿ ದಿನಗಳ ಶೂಟಿಂಗ್ ನಲ್ಲಿ ಚಿಕ್ಕಣ್ಣ ಪಾಲ್ಗೊಂಡಿದ್ದರು. ಹೆಚ್ಚುವರಿ ದಿನಗಳ ಸಂಭಾವನೆ ಪಡೆಯಲು ನಿರಾಕರಿಸಿದ ಚಿಕ್ಕಣ್ಣ, ತಮ್ಮ ದೊಡ್ಡ ಗುಣ ತೋರಿದ್ದರೆಂದು ಹೇಳಲಾಗಿತ್ತು.

ಅವರ ಮತ್ತೊಂದು ವಿಷಯ ಏನೆಂದರೆ, ಚಿಕ್ಕಣ್ಣ ಸಿಂಗರ್ ಕೂಡ ಆಗಿದ್ದಾರೆ. ವಿಜಯ್ ರಾಘವೇಂದ್ರ, ನಿಧಿ ಸುಬ್ಬಯ್ಯ ನಟನೆಯ ‘ನನ್ನ ನಿನ್ನ ಪ್ರೇಮಕತೆ’ ಎಂಬ ಚಿತ್ರದಲ್ಲಿ ಸ್ಟಾರ್ ನಟರಾದ ಉಪೇಂದ್ರ, ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ.

ಈ ಚಿತ್ರದಲ್ಲಿ ಫೀಲಿಂಗ್ ಸಾಂಗ್ ಒಂದನ್ನು ಹಾಡಿರುವ ಚಿಕ್ಕಣ್ಣ, ಆ ಮೂಲಕ ಸಿಂಗರ್ ಕೂಡ ಆಗಿ ಗಮನ ಸೆಳೆದಿದ್ದಾರೆ. ಶಿವು ಜಮಖಂಡಿ ನಿರ್ದೇಶನ ಮಾಡಿರುವ ಈ ಚಿತ್ರವನ್ನು ಆನಂದ ನ್ಯಾಮೇಗೌಡ ನಿರ್ಮಾಣ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...