alex Certify
ಕನ್ನಡ ದುನಿಯಾ       Mobile App
       

Kannada Duniya

ಆಡಿದ ಮಾತಿಗೆ ಸಾರ್ವಜನಿಕವಾಗಿ ಕ್ಷಮೆ ಕೋರಿದ ನಟ

balakrishna

ತೆರೆ ಮೇಲೆ ಭಾರೀ ಡೈಲಾಗ್ ಗಳನ್ನು ಹೇಳಿ ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದ ನಾಯಕ ನಟರೊಬ್ಬರು ನಿಜ ಜೀವನದಲ್ಲಿ ಮಹಿಳೆಯರ ಕುರಿತು ಕೆಟ್ಟದಾಗಿ ಕಮೆಂಟ್ ಮಾಡಿ ಇದೀಗ ಅದು ವಿವಾದ ಪಡೆದುಕೊಳ್ಳುತ್ತಿದ್ದಂತೆಯೇ ಬೇಷರತ್ ಕ್ಷಮೆ ಕೋರಿದ್ದಾರೆ.

ತೆಲುಗು ನಾಯಕ ನಟ ಹಾಗೂ ಶಾಸಕ ನಂದಮೂರಿ ಬಾಲಕೃಷ್ಣ ಕ್ಷಮೆ ಕೋರಿದವರಾಗಿದ್ದು, ನಾರಾ ರೋಹಿತ್ ರ ‘ಸಾವಿತ್ರಿ’ ಚಿತ್ರದ ಅಡಿಯೋ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬಾಲಕೃಷ್ಣ ಮಹಿಳೆಯರ ಕುರಿತಂತೆ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಲಾಗಿತ್ತು.

ಆಂಧ್ರ ಪ್ರದೇಶದ ವಿಪಕ್ಷ ನಾಯಕರು ಹಾಗೂ ಮಹಿಳಾ ಸಂಘಟನೆಗಳು ನಂದಮೂರಿ ಬಾಲಕೃಷ್ಣ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಪ್ರತಿಭಟನೆಯನ್ನೂ ನಡೆಸಲು ಮುಂದಾಗಿದ್ದರು. ಈ ಹಿನ್ನಲೆಯಲ್ಲಿ ಕ್ಷಮೆ ಕೋರಿರುವ ಬಾಲಕೃಷ್ಣ, ಮಹಿಳೆಯರ ಕುರಿತು ತಮಗೆ ಆಪಾರ ಗೌರವವಿದ್ದು, ಯಾರನ್ನೂ ನೋಯಿಸುವ ಉದ್ದೇಶದಿಂದ ತಾವು ಆ ಮಾತನಾಡಿಲ್ಲ. ತಮ್ಮ ಮಾತಿನಿಂದ ನೋವಾಗಿದ್ದರೆ ಅದಕ್ಕೆ ಕ್ಷಮೆ ಕೋರುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...