alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರವೆಸಗಿ ನೇಪಾಳಕ್ಕೆ ಓಡಿ ಹೋಗ್ತಿದ್ದ ನಟ ಅರೆಸ್ಟ್

ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ನಟ ಮನೋಜ್ ಆರ್ ಪಾಂಡೆಯನ್ನು ಗುರುವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಭೋಜ್ಪುರಿ ನಟಿ ಮೇಲೆ ಅತ್ಯಾಚಾರವೆಸಗಿರುವ ಆರೋಪ ಹೊತ್ತಿರುವ ನಟ ಮನೋಜ್ ನೇಪಾಳಕ್ಕೆ ಓಡಿಹೋಗುವ ಪ್ರಯತ್ನದಲ್ಲಿದ್ದ. ಇದಕ್ಕಾಗಿ ಹುಡುಗಿಯೊಬ್ಬಳಿಂದ 5 ಲಕ್ಷ ರೂಪಾಯಿ ಕೇಳಿದ್ದ ಎನ್ನಲಾಗಿದೆ.

ಈ ವಿಷ್ಯ ಮನೋಜ್ ಮಾಜಿ ಪ್ರೇಯಸಿಗೆ ಸಿಕ್ಕಿದೆ. ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಹಾಗೆ ಮನೋಜ್ ಗೆ ಹಣ ನೀಡಲು ಬರ್ತಿದ್ದ ಹುಡುಗಿಯನ್ನು ಹಿಂಬಾಲಿಸಿದ್ದಾರೆ. ಹುಡುಗಿಯಿಂದ ಮನೋಜ್ ಹಣ ಪಡೆಯುತ್ತಿದ್ದಂತೆ ಪೊಲೀಸರನ್ನು ನೋಡಿದ್ದಾನೆ. ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದಾನೆ. ಆದ್ರೆ ಪೊಲೀಸರು ಮನೋಜ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮನೋಜ್ ಹಾಗೂ ಭೋಜ್ಪುರಿಯ ಪ್ರಸಿದ್ಧ ನಟಿ ಐದು ವರ್ಷಗಳಿಂದ ಲಿವ್ ಇನ್ ನಲ್ಲಿದ್ದರು. ಪೀಡಿತ ನಟಿ ಗರ್ಭಪಾತ ಕೂಡ ಮಾಡಿಸಿಕೊಂಡಿದ್ದಳು. ಮದುವೆ ಪ್ರಸ್ತಾಪ ಬಂದ ಬಳಿಕ ನಟಿಯನ್ನು ದೂರ ಮಾಡಿದ ಮನೋಜ್ ಇನ್ನೊಬ್ಬಳನ್ನು ಮದುವೆಯಾಗಿರುವುದಾಗಿ ಹೇಳಿದ್ದ. ಜೊತೆಗೆ ಆಕೆಯಿಂದ ಫೋನ್ ಮಾಡಿಸಿದ್ದ. ಆಕೆ ನಾನು ರಾಜಕೀಯ ಮುಖಂಡನ ಮಗಳು. ನನ್ನ ಪತಿಯಿಂದ ದೂರವಿರು. ಇಲ್ಲವಾದ್ರೆ ಕೊಲೆ ಮಾಡಿಸುತ್ತೇನೆಂದು ಬೆದರಿಕೆ ಹಾಕಿದ್ದಳು. ಆ ನಂತ್ರ ನಟಿ ಪೊಲೀಸರಿಗೆ ಮನೋಜ್ ವಿರುದ್ಧ ದೂರು ನೀಡಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...