alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಮುಂಬೈ: ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಗುರುವಾರ ರಾತ್ರಿ ಮುಂಬೈನಲ್ಲಿ ನಟ ಸಲ್ಮಾನ್ ಖಾನ್ ಅವರ ನಿವಾಸ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ನಿಂದ ಜಾಕ್ವೆಲಿನ್ ತಮ್ಮ ಮನೆಯ ದಾರಿಯಲ್ಲಿ ಸಾಗುತ್ತಿದ್ದಾಗ ಆಟೋ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ಜಾಕ್ವೆಲಿನ್ ಫೆರ್ನಾಡಿಸ್ ಅವರ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ.

‘ರೇಸ್ -3’ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಜಾಕ್ವೆಲಿನ್ ನಟಿಸುತ್ತಿದ್ದಾರೆ. ರೆಮೊ ಡಿಸೋಜ ಅವರ ‘ರೇಸ್ -3’ ಬಹುನಿರೀಕ್ಷೆಯ ಚಿತ್ರವಾಗಿದೆ. ಜಾಕ್ವೆಲಿನ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಇದಕ್ಕಾಗಿ ಮಾರ್ಷಲ್ ಆರ್ಟ್ಸ್ ಅನ್ನು ದಿನಕ್ಕೆ 2 ಗಂಟೆ ಕಾಲ ಅಭ್ಯಾಸ ಮಾಡುತ್ತಿದ್ದಾರೆ.

ಚಿತ್ರದಲ್ಲಿ ಬಾಬಿ ಡಿಯೋಲ್, ಡೈಸಿ ಶಾ, ಅನಿಲ್ ಕಪೂರ್ ಮೊದಲಾದವರು ಅಭಿನಯಿಸಿದ್ದಾರೆ. ಮೇ 15 ರಂದು ಚಿತ್ರದ ಟ್ರೇಲರ್ ರಿಲೀಸ್ ಆಗಲಿದ್ದು, ಈದ್ ಮಿಲಾದ್ ಹಬ್ಬದ ವೇಳೆಗೆ ಚಿತ್ರ ತೆರೆಗೆ ಬರಲಿದೆ.

ಗುರುವಾರ ರಾತ್ರಿ ಸಲ್ಮಾನ್ ಖಾನ್ ನಿವಾಸದಿಂದ ಜಾಕ್ವೆಲಿನ್ ಕಾರಿನಲ್ಲಿ ತೆರಳುವಾಗ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ಆಟೋ ಡಿಕ್ಕಿಯಾಗಿ ಕಾರಿನ ಹೆಡ್ ಲೈಟ್ ಗೆ ಹಾನಿಯಾಗಿದೆ. ಆಟೋ ಚಾಲಕ ಮದ್ಯಪಾನ ಮಾಡಿದ್ದು, ಘಟನೆಗೆ ಕಾರಣವಾಗಿದೆ. ಯಾರಿಗೂ ಅಪಾಯವಾಗಿಲ್ಲ. ಶೀಘ್ರದಲ್ಲೇ ಅಪಘಾತದ ಕುರಿತು ಅಧಿಕೃತ ಹೇಳಿಕೆ ನೀಡುವುದಾಗಿ ಜಾಕ್ವೆಲಿನ್ ಫೆರ್ನಾಂಡಿಸ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...