alex Certify
ಕನ್ನಡ ದುನಿಯಾ       Mobile App
       

Kannada Duniya

ನಟ ಸಿದ್ಧಾರ್ಥ್ ಶುರು ಮಾಡಿದ್ದಾರೆ ವಿನೂತನ ಚಾಲೆಂಜ್

ಇಂಟರ್ನೆಟ್ ಜನರೇಷನ್ ಯುಗದಲ್ಲಿ ಕಿಕಿ ಚಾಲೆಂಜ್ ನಲ್ಲಿ ಬ್ಯುಸಿಯಾಗಿರುವ ಜನರನ್ನು ಸಮಾಜದ ಲಾಭಕ್ಕೆ ಹೇಗೆ ಬಳಸಿಕೊಳ್ಳಬಹುದೆಂಬುದನ್ನು ‘ರಂಗ್ ದೇ ಬಸಂತಿ’ ಚಿತ್ರದ ನಟ ಸಿದ್ಧಾರ್ಥ್ ಚೆನ್ನಾಗಿ ಅರಿತಿದ್ದಾರೆ. ಪ್ರವಾಹ ಪೀಡಿತ ಕೇರಳದ ಜನರಿಗೆ ಸಹಾಯ ಮಾಡಲು ಮುಂದಾಗಿರುವ ಸಿದ್ಧಾರ್ಥ್ ಸಾಮಾಜಿಕ ಜಾಲತಾಣದಲ್ಲಿ ಚಾಲೆಂಜ್ ಒಂದನ್ನು ಶುರು ಮಾಡಿದ್ದಾರೆ.

ಕೇರಳ ಡೊನೇಷನ್ ಚಾಲೆಂಜ್ ಸ್ವೀಕರಿಸಲು ಸಿದ್ಧಾರ್ಥ್ ಕರೆ ನೀಡಿದ್ದಾರೆ. ಕೇರಳದ ಜನರಿಗೆ ನೀಡಿದ ಹಣ ಅಥವಾ ವಸ್ತುವನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕುವಂತೆ ಸಿದ್ಧಾರ್ಥ್ ಮನವಿ ಮಾಡಿದ್ದಾರೆ. ಸಿದ್ದಾರ್ಥ್ 10 ಲಕ್ಷ ರೂಪಾಯಿಯನ್ನು ದೇಣಿಗೆ ನೀಡಿದ್ದು, ಅದ್ರ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಫೋಟೋ ನೋಡಿ ಬೇರೆಯವರು ಪ್ರೇರಿತರಾಗ್ತಾರೆಂಬುದು ಸಿದ್ಧಾರ್ಥ್ ಆಶಯ.

ನಾನು ನಿಮಗೆ ಚಾಲೆಂಜ್ ಮಾಡ್ತೇನೆ. ಭಿಕ್ಷೆ ಬೇಡ್ತೇನೆ. ನಾನು ಕೇರಳ ಡೊನೇಷನ್ ಚಾಲೆಂಜ್ ಸ್ವೀಕರಿಸಿದ್ದೇನೆ. ತುಂಬಾ ಚೆನ್ನಾಗಿತ್ತು. ನೀವು ಇದನ್ನು ಮಾಡಿ ಎಂದು ಸಿದ್ಧಾರ್ಥ್ ಟ್ವಿಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...