alex Certify
ಕನ್ನಡ ದುನಿಯಾ       Mobile App
       

Kannada Duniya

ಹಣಕ್ಕೆ ಬೇಡಿಕೆ ಇಟ್ಟು ನಟನಿಗೆ ಬ್ಲಾಕ್ ಮೇಲ್

Actor Dileep demands 50 crore as compensation-Onlookers Mediaಮಲಯಾಳಂ ನ ಖ್ಯಾತ ನಟ ದಿಲೀಪ್ ಗೆ 1.5 ಕೋಟಿ ರೂ. ಬೇಡಿಕೆ ಇಟ್ಟು ಬ್ಲಾಕ್ ಮೇಲರ್ ಒಬ್ಬ ಕರೆ ಮಾಡಿದ್ದು, ಈ ಸಂಬಂಧ ಕೊಚ್ಚಿ ಪೊಲೀಸರಿಗೆ ನಟ ದಿಲೀಪ್ ದೂರು ನೀಡಿದ್ದಾರೆ.

ಬಹು ಭಾಷಾ ನಟಿಗೆ ಚಲಿಸುತ್ತಿದ್ದ ಕಾರಿನಲ್ಲೇ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತು ಜೈಲಿನಲ್ಲಿರುವ ಪಲ್ಸರ್ ಸುನಿಯ ಸಹಚರನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಈ ಕರೆ ಮಾಡಿದ್ದಾನೆನ್ನಲಾಗಿದ್ದು, ದಿಲೀಪ್ ರ ಸ್ನೇಹಿತ ಹಾಗೂ ನಿರ್ದೇಶಕ ನಾದಿರ್ ಶಾ ಮತ್ತು ಮ್ಯಾನೇಜರ್ ಅಪುನಿ ಈ ಕರೆ ಸ್ವೀಕರಿಸಿದ್ದರು.

ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ದಿಲೀಪ್ ಕೈವಾಡವಿದೆಯೆಂದು ಈ ಹಿಂದೆ ಕೆಲ ಮಾಧ್ಯಮಗಳು ವರದಿ ಮಾಡಿದ್ದು, ಮಾನಹಾನಿ ಮೊಕದ್ದಮೆಯನ್ನು ದಿಲೀಪ್ ಹೂಡಿದ್ದರು. ಇದೀಗ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿರುವ ಪಲ್ಸರ್ ಸುನಿಯ ಸಹಚರ ದಿಲೀಪ್ ರಿಗೆ ಹಣದ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡಿದ್ದು, ಕೊಚ್ಚಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಡಿಯೋ ದಾಖಲೆಯನ್ನು ಪೊಲೀಸರಿಗೆ ದಿಲೀಪ್ ನೀಡಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...