alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗೆ ‘ದರ್ಶನ್’ ಅಭಿಮಾನದ ಸತ್ಕಾರ

ಸ್ಟಾರ್ ಗಳಿಗೆ ಅಭಿಮಾನಿಗಳು ಇರೋದು ಕಾಮನ್. ಸ್ಯಾಂಡಲ್ ವುಡ್ ಸ್ಟಾರ್ ಗಳು ಅಭಿಮಾನಿಗಳನ್ನು ದೇವರಂತೆ ಕಾಣುತ್ತಾರೆ. ಅದಕ್ಕಾಗಿಯೇ ಅಣ್ಣಾವರು ಅಭಿಮಾನಿ ದೇವರುಗಳೇ ಎನ್ನುತ್ತಿದ್ದರು. ಈ ಪರಂಪರೆ ಈಗಲೂ ಮುಂದುವರೆದಿದೆ.

ಅಭಿಮಾನಿಗಳು ಸ್ಟಾರ್ ಗಳ ಬರ್ತಡೆ ಹಾಗೂ ಚಿತ್ರ ಯಶಸ್ವಿಯಾದಾಗ ಮನೆಗೆ ಹೋಗಿ ವಿಶ್ ಮಾಡಿಕೊಂಡು ಫೋಟೋ ತೆಗೆಸಿಕೊಳ್ಳುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೂ ಅಭಿಮಾನಿಗಳ ಸಂಖ್ಯೆ ಹೆಚ್ಚು.

ಇತ್ತೀಚೆಗೆ ದರ್ಶನ್ ಮೈಸೂರಿನ ತಮ್ಮ ಫಾರ್ಮ್ ಹೌಸ್ ನಲ್ಲಿ ನಾಡದೇವತೆ ಚಾಮುಂಡೇಶ್ವರಿ ಪೂಜೆ ನಡೆಸಿದ್ದರು. ದರ್ಶನ್ ಮೈಸೂರಿನ ಮನೆಯಲ್ಲಿ ಇದ್ದಾರೆ ಎಂದು ತಿಳಿದು, ವಿಕಲಚೇತನ ಅಭಿಮಾನಿಯೊಬ್ಬ ಅವರನ್ನು ಕಾಣಲು ಹೋಗಿದ್ದಾರೆ.

ಅಭಿಮಾನಿಯನ್ನು ಕಂಡ ದರ್ಶನ್, ಪೂಜೆಯ ಔತಣ ಕೂಟಕ್ಕೆ ಕರೆದಿದ್ದಾರೆ. ನೆಚ್ಚಿನ ನಟ ನೀಡಿದ ಆಮಂತ್ರಣಕ್ಕೆ ಅಭಿಮಾನಿ ಹೋಗಿದ್ದಾರೆ. ಮನೆಗೆ ಹಿಂತಿರುಗುವಾಗ ವಿಕಲಚೇತನ ಅಭಿಮಾನಿಯೊಂದಿಗೆ ದರ್ಶನ್ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋವನ್ನು ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ಹಾಕಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...