alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾಗೋದಾಗಿ ನಂಬಿಸಿ NRIಗೆ ವಂಚಿಸಿದ್ದಾಳೆ ಈ ನಟಿ

ಕಾಲಿವುಡ್ ನಟಿಯೊಬ್ಳು ಜರ್ಮನಿ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ಗೆ ಮಕ್ಮಲ್ ಟೋಪಿ ಹಾಕಿದ್ದಾಳೆ. ನಟಿ, ಅವಳ ತಾಯಿ, ಸಹೋದರ ಮತ್ತು ತಂದೆಯೆಂದು ನಾಟಕವಾಡಿದ ವ್ಯಕ್ತಿ ಹೀಗೆ ನಾಲ್ವರು ಸೇರಿ 41 ಲಕ್ಷ ರೂಪಾಯಿ ವಂಚಿಸಿದ್ದಾರೆ.

ನಟಿಯನ್ನು ಶ್ರುತಿ ಅಂತಾ ಪೊಲೀಸರು ಗುರುತಿಸಿದ್ದಾರೆ. ಈಕೆ ಇನ್ನೂ ರಿಲೀಸ್ ಆಗದ ‘ಆಡಿ ಪೋದ ಅವನಿ’ ಎಂಬ  ಚಿತ್ರದಲ್ಲಿ ನಟಿಸಿದ್ದಾಳೆ. ಸೇಲಂನ ಬಾಲ ಮುರುಗನ್ ಜರ್ಮನಿಯ ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾನೆ. ಮದುವೆಗಾಗಿ ಆತ ವಧುವಿನ ಹುಡುಕಾಟದಲ್ಲಿದ್ದ.

2017ರ ಮೇನಲ್ಲಿ ಆತ ಮ್ಯಾಟ್ರಿಮೊನಿ ಸೈಟ್ ನಲ್ಲಿ ತನ್ನ ಪ್ರೊಫೈಲ್ ಪೋಸ್ಟ್ ಮಾಡಿದ್ದ. ನಟಿ ಶ್ರುತಿ ತನ್ನನ್ನು ಮೈಥಿಲಿ ವೆಂಕಟೇಶ್ ಎಂದು ಪರಿಚಯಿಸಿಕೊಂಡು ಆತನ ಸ್ನೇಹ ಬೆಳೆಸಿದ್ದಳು. ತನಗೆ ಬ್ರೈನ್ ಟ್ಯೂಮರ್ ಇದೆ, ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದೇನೆ. ತನ್ನ ತಾಯಿಗೆ ಹೃದಯದ ಸಮಸ್ಯೆ ಇದೆ ಅಂತಾ ಹೇಳಿದ್ದಳು.

2017ರ ಮೇನಿಂದ 2018ರ ಜನವರಿ 1ರವರೆಗೆ ಬಾಲಮುರುಗನ್ ಶ್ರುತಿಗೆ ಒಟ್ಟು 41 ಲಕ್ಷ ರೂಪಾಯಿ ಕೊಟ್ಟಿದ್ದಾನೆ. ಶ್ರುತಿಯ ಫೋಟೋವನ್ನು ತನ್ನ ಸ್ನೇಹಿತರಿಗೆ ಕಳಿಸಿದ್ದ ಎನ್ ಆರ್ ಐ ಗೆ ಶಾಕ್ ಕಾದಿತ್ತು. ಆಕೆ ಇದೇ ರೀತಿ ಸುಳ್ಳು ಹೇಳಿ ಹಲವರಿಗೆ ಮೋಸ ಮಾಡಿದ್ದಾಳೆ ಅಂತಾ ಸ್ನೇಹಿತರು ತಿಳಿಸಿದ್ರು. ಕೂಡಲೇ ಆತ ಪೊಲೀಸರಿಗೆ ದೂರು ನೀಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...