alex Certify
ಕನ್ನಡ ದುನಿಯಾ       Mobile App
       

Kannada Duniya

28 ದಿನದಲ್ಲಿ 18 ಕೆಜಿ ತೂಕ ಇಳಿಸಿಕೊಂಡ ನಟ

RANDHEEP

ಪಾತ್ರಕ್ಕೆ ಜೀವ ತುಂಬಲು ಕಲಾವಿದರು ಎಷ್ಟೆಲ್ಲಾ ಶ್ರಮಪಡುತ್ತಾರೆ ಎಂಬುದನ್ನು ಬಾಯಿ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಕೆಲವರು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದರೆ, ಮತ್ತೆ ಕೆಲವರು ಸಹಜ ಅಭಿನಯದಿಂದಲೇ ಗಮನ ಸೆಳೆಯುತ್ತಾರೆ. ಹೀಗೆ ಪಾತ್ರಕ್ಕಾಗಿ ಕಲಾವಿದರೊಬ್ಬರು ಕಸರತ್ತು ನಡೆಸಿದ ಸ್ಟೋರಿ ಇಲ್ಲಿದೆ ನೋಡಿ.

ಪಾಕಿಸ್ತಾನದ ಜೈಲಿನಲ್ಲಿ ಹಲವಾರು ವರ್ಷ ಕಾಲ ಸಂಕಷ್ಟ ಅನುಭವಿಸಿದ ಸರಬ್ಜಿತ್ ಸಿಂಗ್ ಕುರಿತಂತೆ ಸಿನಿಮಾ ನಿರ್ಮಾಣವಾಗುತ್ತಿದೆ. ಭಾರತ ಮೂಲದ ಸರಬ್ಜಿತ್ ಆಕಸ್ಮಿಕವಾಗಿ ಪಾಕ್ ನಿಂದ ಬಂಧಿತರಾಗುತ್ತಾರೆ. ಭಯೋತ್ಪಾದನೆ ಆರೋಪದ ಮೇಲೆ ಲಾಹೋರ್ ಜೈಲಿನಲ್ಲೇ ವರ್ಷಾನುಗಟ್ಟಲೆ ಕಾಲ ಕಳೆಯುವ ಅವರು, ಜೈಲಿನಲ್ಲಿ ಸಹಕೈದಿಗಳಿಂದ ಹಲ್ಲೆಗೆ ಒಳಗಾಗಿ ಸಾವನ್ನಪ್ಪುತ್ತಾರೆ. ಈ ಸರಬ್ಜಿತ್ ಪಾತ್ರದಲ್ಲಿ ಬಾಲಿವುಡ್ ನಟ ರಣದೀಪ್ ಹೂಡಾ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಸಿನಿಮಾವೊಂದರ ಪಾತ್ರಕ್ಕಾಗಿ 94 ಕೆಜಿ ಇದ್ದ ರಣದೀಪ್ ಹೂಡಾ, ಸರಬ್ಜಿತ್ ಪಾತ್ರಕ್ಕಾಗಿ ಕೇವಲ 28 ದಿನಗಳ ಅವಧಿಯಲ್ಲಿ ಬರೋಬ್ಬರಿ 18 ಕೆಜಿ ಡೌನ್ ಆಗಿದ್ದಾರೆ. ಅಂದಹಾಗೇ ಈ ಸಿನಿಮಾದಲ್ಲಿ ಐಶ್ವರ್ಯಾ ರೈ ಕೂಡ ನಟಿಸುತ್ತಿದ್ದು, ಓಮಂಗ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ರಣ್ ದೀಪ್ ಇಷ್ಟು ಕಡಿಮೆ ದಿನದಲ್ಲಿ ಪಾತ್ರಕ್ಕಾಗಿ ಬರೋಬ್ಬರಿ ತೂಕ ಇಳಿಸಿಕೊಂಡು, ಕೆದರಿದ ಕೂದಲು, ಬಡಕಲು ದೇಹದ ಚಿತ್ರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೊಳಗಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...