alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಯಾಂಡಲ್ ವುಡ್ ನಟನ ಮೇಲೆ ಹಲ್ಲೆ

ಸ್ಯಾಂಡಲ್ ವುಡ್ ನಟ ಹರ್ಷ ಅವರ ಮೇಲೆ ಹೋಟೆಲ್ ಒಂದರ ಹುಡುಗರು ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.

ವರ್ಧನ, ಗಜಪಡೆ, ರಾಜಾಹುಲಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಹರ್ಷ ಹಲ್ಲೆಗೊಳಗಾಗಿದ್ದು, ಸ್ನೇಹಿತನ ಮದುವೆಗೆಂದು ಮೈಸೂರಿಗೆ ತೆರಳಿ ವಾಪಾಸ್ ಬರುವ ವೇಳೆ ಈ ಘಟನೆ ನಡೆದಿದೆ.

ಹರ್ಷ ಮತ್ತವರ ಸ್ನೇಹಿತರು ನಾಗಮಂಗಲದ ಬೆಳ್ಳೂರು ಕ್ರಾಸ್ ಬಳಿ ಕಾರ್ ನಿಲ್ಲಿಸಿ ಊಟಕ್ಕೆಂದು ಹೋಟೆಲ್ ಒಂದಕ್ಕೆ ತೆರಳಿದ್ದು, ಸರ್ವ್ ಮಾಡುವ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದೆ.

ಆಗ ಹೊಟೇಲ್ ಹುಡುಗರು, ಹರ್ಷ ಮತ್ತವರ ಸ್ನೇಹಿತರನ್ನು ಬಂಧನದಲ್ಲಿರಿಸಿಕೊಂಡು ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...