alex Certify
ಕನ್ನಡ ದುನಿಯಾ       Mobile App
       

Kannada Duniya

60 ವರ್ಷದ ನಂತರವೂ ತೆರೆ ಮೇಲೆ ಅಬ್ಬರಿಸುತ್ತಿದ್ದಾರೆ ಈ ನಟರು

rajinikanth-kabali j24

ಸಿನಿಮಾಗಳಲ್ಲಿ ನಾಯಕಿಯಾದವರು ಒಂದಿಷ್ಟು ವರ್ಷಗಳ ನಂತರ, ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಾರೆ. ಇಲ್ಲವೇ ಚಿತ್ರರಂಗದಿಂದ ದೂರ ಉಳಿಯುತ್ತಾರೆ. ಆದರೆ, ನಾಯಕ ನಟರು ಮಾತ್ರ, ವಯಸ್ಸಾದ ನಂತರವೂ ತೆರೆಯ ಮೇಲೆ ರಾರಾಜಿಸುತ್ತಾರೆ.

ಭಾರತ ಚಿತ್ರರಂಗದ ಹಲವು ಭಾಷೆಗಳಲ್ಲಿನ ನಟರು 60 ರ ನಂತರವೂ ತಮ್ಮ ಖದರ್ ಉಳಿಸಿಕೊಂಡಿದ್ದಾರೆ. ಆಂಗ್ರಿ ಯಂಗ್ ಮ್ಯಾನ್ ಆಗಿದ್ದ ಬಾಲಿವುಡ್ ನಟ ಅಮಿತಾಬ್ ಬಚ್ಚನ್ 70 ವರ್ಷದ ನಂತರವೂ ವಿಭಿನ್ನ ಪಾತ್ರಗಳ ಮೂಲಕ ಪೈಫೋಟಿ ನೀಡುತ್ತಿದ್ದಾರೆ. ಅದೇ ರೀತಿ ಸೂಪರ್ ಸ್ಟಾರ್ ರಜನಿಕಾಂತ್ 60 ದಾಟಿದ್ದರೂ, ಸ್ಟೈಲ್, ಡೈಲಾಗ್ ಬದಲಾಗಿಲ್ಲ. ರಜನಿಕಾಂತ್ ಸಿನಿಮಾಗಳೆಂದರೆ ಅಭಿಮಾನಿಗಳಿಗೆ ಹಬ್ಬ ಇದ್ದಂತೆ. ಇನ್ನು ಯುನಿವರ್ಸಲ್ ಸ್ಟಾರ್ ಕಮಲ್ ಹಾಸನ್ 60 ಆಗಿದ್ದರೂ, ಖದರ್ ಕಡಿಮೆಯಾಗಿಲ್ಲ.

ಪ್ರಯೋಗಾತ್ಮಕ ಸಿನಿಮಾಗಳ ಮೂಲಕ ಕಮಲ್ ಹಾಸನ್ ಕಮಾಲ್ ಮಾಡುತ್ತಾರೆ. ಅದೇ ರೀತಿ, ಟಾಲಿವುಡ್ ಸೂಪರ್ ಸ್ಟಾರ್ ಚಿರಂಜೀವಿ 60 ರ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ಕನ್ನಡದಲ್ಲಿ ಅಂಬರೀಶ್ ಖದರ್ ಹಾಗೆಯೇ ಇದೆ. ಅನಂತ್ ನಾಗ್ ಕೂಡಾ ಈಗಲೂ ತೆರೆ ಮೇಲೆ ಕಮಾಲ್ ಮಾಡುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...