alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಶಾರುಕ್ ಪುತ್ರನ ಕ್ಯೂಟ್ ವಿಡಿಯೋ

ನಟ ಶಾರುಕ್ ಖಾನ್ ರ ಕಿರಿಯ ಪುತ್ರ ಅಬ್ರಾಹಂ ಏನೇ ಮಾಡಿದ್ರೂ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗ್ತಿದೆ. ಸ್ಟಾರ್ ಕಿಡ್ ಆಗಿರೋದ್ರಿಂದ ಸಹಜವಾಗಿಯೇ ಅಬ್ರಾಹಂಗೆ ಜನಪ್ರಿಯತೆಯಿದೆ. ತಮಗಿಂತ್ಲೂ ಹೆಚ್ಚಾಗಿ ಅಬ್ರಾಹಂ ಎಲ್ಲರ ಗಮನ ಸೆಳೆಯುತ್ತಾನೆ ಅಂತಾ ಖುದ್ದು ಶಾರುಕ್ ಹೇಳ್ತಾರೆ.

ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಶಾರುಕ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಶಾರುಕ್ ಹಾಗೂ ಅಬ್ರಾಹಂ ಇಬ್ಬರೂ ಮ್ಯೂಸಿಕಲ್ ಟೈಲ್ಸ್ ಮೇಲೆ ಕುಣಿದಿರುವ ವಿಡಿಯೋ ಇದು. ಮಗನ ಜೊತೆ ಶಾರುಕ್ ಕೂಡ ಮಗುವಾಗಿರೋದಕ್ಕೆ ಈ ವಿಡಿಯೋ ಸಾಕ್ಷಿ.

ಇದನ್ನು ತಮ್ಮ ಮಕ್ಕಳಾದ ಆರ್ಯನ್, ಸುಹಾನಾ ಹಾಗೂ ಅಬ್ರಾಹಂಗೆ ಶಾರುಕ್ ಡೆಡಿಕೇಟ್ ಮಾಡಿದ್ದಾರೆ. ಸ್ಪಾರ್ಕ್ ಎ ಚೇಂಜ್ ಫೌಂಡೇಶನ್ ಮಕ್ಕಳ ಜೊತೆಗೂ ಶಾರುಕ್ ಮಕ್ಕಳ ದಿನ ಆಚರಿಸಿದ್ದಾರೆ. ಶೂಟಿಂಗ್ ಸೆಟ್ ಗೆ ಬಂದಿದ್ದ ಪುಟಾಣಿಗಳಿಗೆ ಶಾರುಕ್ ಶುಭ ಕೋರಿದ್ರು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...