alex Certify
ಕನ್ನಡ ದುನಿಯಾ       Mobile App
       

Kannada Duniya

ಮೋಟೋಕ್ರಾಸ್ ರೇಸರ್ ಆದ್ರಾ ಅಂಬಿ ಪುತ್ರ ಅಭಿಷೇಕ್

ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಗೌಡ ‘ಅಮರ್’ ಆಗಿ ಚಂದನವನದಲ್ಲಿ ಕೆರಿಯರ್ ಶುರುಮಾಡ್ತಿದ್ದಾರೆ. ಅಂಬರೀಷ್ ಹುಟ್ಟುಹಬ್ಬದಂದು ಅಭಿಷೇಕ್ ಸಿನಿಮಾ ಮುಹೂರ್ತ ನಡೆದಿತ್ತು. ನಾಗಶೇಖರ್ ಆಕ್ಷನ್ ಕಟ್ ಹೇಳ್ತಿರೋ ಈ ಚಿತ್ರದಲ್ಲಿ ಅಭಿಷೇಕ್ ಯಾವ ರೋಲ್ ಪ್ಲೇ ಮಾಡ್ತಿದ್ದಾರೆ ಅನ್ನೋದ್ರ ಬಗ್ಗೆ ಎಲ್ಲರಿಗೂ ಕ್ಯೂರಿಯಾಸಿಟಿ ಇತ್ತು. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಅಮರ್ ಸಿನಿಮಾದಲ್ಲಿ ಅಂಬಿ ಪುತ್ರ ಮೋಟೋಕ್ರಾಸ್ ರೈಡರ್ ಆಗಿ ತೆರೆಯ ಮೇಲೆ ಮಿಂಚಲಿದ್ದಾರೆ. ಅಷ್ಟೇ ಅಲ್ಲ. ನಾಯಕಿ ತಾನ್ಯಾ ಕೂಡ ಮೋಟೋಕ್ರಾಸ್ ರೈಡರ್ ಆಗಿ ಕಾಣಿಸಿಕೊಳ್ತಿದ್ದಾರೆ. ಈಗಾಗ್ಲೇ ಚಿತ್ರತಂಡ ಕೊಯಂಬತ್ತೂರಿನಲ್ಲಿ ಬೀಡುಬಿಟ್ಟಿದೆ. ಅಲ್ಲಿ ಮೋಟೋಕ್ರಾಸ್ ರೇಸ್ ನ ಹಲವು ಸನ್ನಿವೇಶಗಳ ಚಿತ್ರೀಕರಣ ನಡೀತಿದೆ. ಮೊದಲ ಚಿತ್ರದಲ್ಲೇ ರಫ್ ಅಂಡ್ ಟಫ್ ಕ್ಯಾರಕ್ಟರ್ ಪ್ಲೇ ಮಾಡ್ತಿರೋದಕ್ಕೆ ಯಂಗ್ ರೆಬೆಲ್ ಸ್ಟಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ಸಹಜವಾಗಿಯೇ ಬೈಕ್ ಕ್ರೇಜ್ ಇದೆ. ಆದ್ರೆ ರೇಸಿಂಗ್ ನನಗೆ ಹೊಸದು. ಈ ಬಗ್ಗೆ ಮೋಟೋಕ್ರಾಸ್ ಪರಿಣತರನ್ನ ಭೇಟಿಯಾಗಿ ಅವರಿಂದ ಸಲಹೆ ಪಡೆದು ಪಾತ್ರಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದೀನಿ ಅಂತಾರೆ ಯಂಗ್ ರೆಬೆಲ್ ಸ್ಟಾರ್. ಇನ್ನು ಚಿತ್ರದಲ್ಲಿ ಥ್ರಿಲ್ಲಿಂಗ್ ಸಾಹಸ ಸನ್ನಿವೇಶಗಳು ಇರಲಿವೆಯಂತೆ. ಅದಕ್ಕೆ ಕೂಡ ಅಭಿಷೇಕ್ ಭರ್ಜರಿ ತಯಾರಿ ನಡೆಸಿದ್ದಾರಂತೆ. ಒಟ್ಟಿನಲ್ಲಿ ಅಭಿಷೇಕ್ ಧಾಂ ಧೂಮ್ ಆಗಿ ತೆರೆ ಮೇಲೆ ವಿಜೃಂಭಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...