alex Certify
ಕನ್ನಡ ದುನಿಯಾ       Mobile App
       

Kannada Duniya

ಸುಳ್ಳು ಸುದ್ದಿ ಪ್ರಕಟಿಸಿದ್ದಕ್ಕೆ ಅಭಿಷೇಕ್ ಬಚ್ಚನ್ ಗರಂ

ಬಾಲಿವುಡ್ ನ ಜ್ಯೂನಿಯರ್ ಬಚ್ಚನ್ ಅಭಿಷೇಕ್ ಮಾಧ್ಯಮಗಳ ಮೇಲೆ ಗರಂ ಆಗಿದ್ದಾರೆ. ವೆಬ್ಸೈಟ್ ಒಂದರಲ್ಲಿ ಪ್ರಕಟವಾದ ಸುದ್ದಿಯೊಂದನ್ನ ಅಭಿಷೇಕ್ ಟೀಕಿಸಿದ್ದಾರೆ. ಪೈಪೋಟಿಗೆ ಬಿದ್ದು ಸುದ್ದಿ ಪ್ರಕಟಿಸುವ ಆತುರದಲ್ಲಿ ಸುಳ್ಳು ಸುದ್ದಿ ಪ್ರಕಟಿಸದಿರಿ. ಸುದ್ದಿ ಸೃಷ್ಟಿಸಬೇಕೆಂಬ ನಿಮ್ಮ ಆತುರದ ಮಧ್ಯೆ ಸತ್ಯ ಯಾವುದು ಅನ್ನೋದನ್ನು ಅರಿಯುವ ಸಹನೆ ಇರಲಿ , ಇಂಟರ್ ನೆಟ್ ಅನ್ನೋ ಪ್ರಬಲ ಮಾಧ್ಯಮದಲ್ಲಿ ಊಹಾಪೋಹದ ಸುದ್ದಿ ಹರಡಬೇಡಿ ಅಂತ ಅಭಿಷೇಕ್ ಗರಂ ಆಗಿ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ಲಂಡನ್ನಿಂದ ಮುಂಬೈಗೆ ಪತ್ನಿ ಐಶ್ವರ್ಯ ರೈ ಬಚ್ಚನ್ ಮತ್ತು ಪುತ್ರಿ ಆರಾಧ್ಯ ಜೊತೆಗೆ ಆಗಮಿಸಿದ ವೇಳೆ ಅಭಿಷೇಕ್ ನಿಂದ ಐಶ್ವರ್ಯ ಸ್ವಲ್ಪ ಅಂತರವನ್ನು ಕಾಯ್ದುಕೊಂಡಿದ್ದರು. ಈ ವಿಡಿಯೋ ಆಧಾರದ ಮೇಲೆ ದಂಪತಿ ನಡುವೆ ಜಗಳ ನಡೆದಿದೆ ಅಂತ ವೆಬ್ ಪೋರ್ಟಲ್ ಒಂದು ವರದಿ ಮಾಡಿತ್ತು. ಜಗಳ ನಡೆದಿರುವ ಕಾರಣಕ್ಕೆ ಐಶ್ವರ್ಯ ರೈ ಪುತ್ರಿಯನ್ನು ಅಭಿಷೇಕ್ ಕೈಹಿಡಿದುಕೊಳ್ಳದಂತೆ ತಡೆದಿದ್ದಾರೆ ಅಂತ ಆ ವರದಿಯಲ್ಲಿ ಬರೆಯಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...