alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಗಾಯಕರನ್ನು ಪ್ರಮೋಟ್ ಮಾಡುತ್ತಿರುವುದಕ್ಕೆ ಅಭಿಜಿತ್ ಕಿಡಿ

ಮುಂಬೈ: ಈ ಹಿಂದೆ ಬಾಲಿವುಡ್ ನ ಬಾದ್ ಶಾ ಶಾರುಕ್ ಖಾನ್ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದ ಗಾಯಕ ಅಭಿಜಿತ್ ಭಟ್ಟಾಚಾರ್ಯ ಇದೀಗ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

ಸಲ್ಮಾನ್ ಖಾನ್ ಪಾಕಿಸ್ತಾನದ ಗಾಯಕರನ್ನು ಪ್ರಮೋಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ‘ಸಲ್ಮಾನ್ ಖಾನ್ ಅವರ ಸಿನಿಮಾಗಳಲ್ಲಿ ಹಾಡಲು ಪಾಕಿಸ್ತಾನದ ಗಾಯಕರನ್ನು ಏಕೆ ಪ್ರಮೋಟ್ ಮಾಡುತ್ತಿದ್ದಾರೆ. ಭಾರತೀಯ ಗಾಯಕರು ಅವರ ಸಿನಿಮಾದಲ್ಲಿ ಹಾಡಲು ಸಮರ್ಥರಾಗಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

ಹಾಗೇ ‘ಭಾರತೀಯ ಸಿನಿಮಾರಂಗದಲ್ಲಿ ಕೆಲಸ ಮಾಡದಂತೆ ಪಾಕಿಸ್ತಾನಿ ಕಲಾವಿದರಿಗೆ ನಿರ್ಬಂಧ ಹೇರಬೇಕು. ಒಂದು ಕಡೆ ಈ ಪಾಕಿಸ್ತಾನಿಗಳು ನಮ್ಮ ಸೈನಿಕರನ್ನು ಕೊಲ್ಲುತ್ತಿದ್ದಾರೆ. ಆದರೆ ಇನ್ನೊಂದು ಕಡೆ ಸಲ್ಮಾನ್ ಪಾಕಿಸ್ತಾನದ ಪ್ರತಿಭೆಗೆ ಅವಕಾಶ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಮೈ ಹೂ ನಾ ಚಿತ್ರದ ನಂತರ ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡುವುದನ್ನು ಯಾಕೆ ನಿಲ್ಲಿಸಿದೆ ಎಂಬುದನ್ನೂ ಅಭಿಜಿತ್ ಹೇಳಿದ್ದಾರೆ. ನಾನು ಯಾವುದೇ ಖಾನ್ ಗಳ ಜತೆ ಮುಂದೆ ಹಾಡುವುದಿಲ್ಲ. ‘ಮೈ ಹೂ ನಾ’ ಸಮಯದಲ್ಲಿ ಎಲ್ಲರಿಗೂ ಸಲಾಂ ಹೊಡೆದು ಬದುಕಬೇಕಾದ ಸ್ಥಿತಿ ಇತ್ತು ಎಂದು ಆರೋಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...