alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಕೂಟರ್ ಚಲಾಯಿಸಿ ದಂಡ ತೆತ್ತ ಸಲ್ಮಾನ್ ಸಹೋದರಿಯ ಪತಿ

ಆಯುಷ್ ಶರ್ಮಾ ಮತ್ತು ವರಿನಾ ಹುಸೇನ್ ಅಭಿನಯದ ಲವ್ ರಾತ್ರಿ ಸಿನಿಮಾದ ಪ್ರಮೋಷನ್ ವೇಳೆ ನಟ-ನಟಿಯರಿಬ್ಬರು ಸಂಚಾರಿ ನಿಯಮ ಉಲ್ಲಂಘಿಸಿದ ಕಾರಣಕ್ಕೆ ದಂಡ ಕಟ್ಟಿದ ಪ್ರಸಂಗ ನಡೆದಿದೆ. ವಡೋದರಾದಲ್ಲಿ ಚಿತ್ರದ ಪ್ರಮೋಶನ್ ನಡೆಸುವ ಸಂದರ್ಭದಲ್ಲಿ ಆಯುಷ್ ಶರ್ಮಾ ಮತ್ತು ವರಿನಾ ಹುಸೇನ್ ಸ್ಕೂಟರ್ ಸವಾರಿ ನಡೆಸಿದ್ದರು.

ಈ ಸಂದರ್ಭದಲ್ಲಿ ಅವರಿಬ್ಬರು ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡಿದ್ದರು. ಈ ವಿಚಾರವನ್ನು ವಡೋದರಾದ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದವರಿಂದಲೇ ತಪ್ಪು ನಡೆದಿರುವ ಕಾರಣಕ್ಕಾಗಿ ಆಯುಷ್ ಶರ್ಮಾ ಮತ್ತು ವರಿನಾ ಹುಸೇನ್ ಗೆ ಪೊಲೀಸರು ತಲಾ 100 ರೂಪಾಯಿ ದಂಡ ವಿಧಿಸಿದ್ದಾರೆ .

ಆಯುಷ್ ಮತ್ತು ವರಿನಾ ಉಳಿದಿದ್ದ ಹೊಟೇಲ್ ಗೆ ಬಂದು ಪೊಲೀಸರು ರಸೀತಿ ನೀಡಿ ದಂಡವನ್ನು ಕಟ್ಟಿಸಿಕೊಂಡಿದ್ದಾರೆ. ಸಂಜೆ ಐದು ಗಂಟೆಯಿಂದ ಪ್ರಚಾರ ಕಾರ್ಯ ಶುರುಮಾಡಿದ ಸಿನಿಮಾದ ನಾಯಕ, ನಾಯಕಿಯ ಫೋಟೋ ಸಾಮಾಜಿಕ ಜಾಲತಾಣದಲ್ಲೂ ಭಾರೀ ಸದ್ದು ಮಾಡಿತ್ತು. ಅಕ್ಟೋಬರ್ 5ರಂದು ಲವ್ ರಾತ್ರಿ ಸಿನಿಮಾ ತೆರೆಗೆ ಬರಲಿದೆ. ಅಭಿರಾಜ್ ಮನಾವಾಲೆ ಚಿತ್ರವನ್ನು ನಿರ್ದೇಶಿಸಿದ್ದು, ಸಲ್ಮಾನ್ ಖಾನ್ ಈ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...