alex Certify
ಕನ್ನಡ ದುನಿಯಾ       Mobile App
       

Kannada Duniya

ಕಡೆಗೂ ಬದುಕಲಿಲ್ಲ ಅಮೀರ್ ಖಾನ್ ಯುವ ಅಭಿಮಾನಿ

aamir-khan-nihal-bitla 6890ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ 15 ವರ್ಷದ ನಿಹಾಲ್ ಬಿಟ್ಲಾ ಸಾವನ್ನಪ್ಪಿದ್ದಾನೆ. ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ಅಭಿಮಾನಿಯಾಗಿದ್ದ ಈತ ಕೆಲ ತಿಂಗಳುಗಳ ಹಿಂದೆ ಅವರನ್ನು ಭೇಟಿಯಾಗಿದ್ದ.

ಮುಂಬೈನ ಹೊರ ವಲಯದಲ್ಲಿ ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದ ನಿಹಾಲ್, ಪ್ರೊಜೇರಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದಾಗಿ ಆತನ ದೇಹ ಮೆದುಳಿಗಿಂತ ಎಂಟು ಪಟ್ಟು ಅಧಿಕವಾಗಿ ಬೆಳೆದಿತ್ತು.

ಹೀಗಾಗಿ ಅಪ್ರಾಪ್ತನಾಗಿರುವಾಗಲೇ ವಯಸ್ಸಾದವನಂತೆ ಕಾಣುತ್ತಿದ್ದ ನಿಹಾಲ್ ಬಿಟ್ಲಾನ ಕುರಿತ ಸುದ್ದಿಯೊಂದು ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಹರಿದಾಡಿತ್ತು. ಆತ ತಮ್ಮ ಅಭಿಮಾನಿ ಎಂಬ ವಿಷಯ ಅರಿತ ಅಮೀರ್ ಖಾನ್ ಆ ಸಂದರ್ಭದಲ್ಲಿ ಆತನ ಮನೆಗೆ ಭೇಟಿ ನೀಡಿದ್ದಲ್ಲದೇ ಆತ ನೀಡಿದ ಪೇಟಿಂಗ್ ಅನ್ನು ಉಡುಗೊರೆಯಾಗಿ ಪಡೆದಿದ್ದು, ಅದನ್ನು ತಮ್ಮ ಬೆಡ್ ರೂಮಿನಲ್ಲಿ ಹಾಕಿಕೊಳ್ಳುವುದಾಗಿ ಪ್ರಾಮಿಸ್ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...