alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೀರ್ ಖಾನ್ ಹೊಸ ಬೈಕ್ ನ ವಿಶೇಷತೆಯೇನು ಗೊತ್ತಾ..?

aamir-khan-buys-his-new-bikeಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ಬಜಾಜ್ ವಿ ಮೋಟಾರ್ ಸೈಕಲ್ ಖರೀದಿಸಿದ್ದಾರೆ. ‘ಧೂಮ್ 3’ ಚಿತ್ರದಲ್ಲಿ ವಿಶೇಷ ಸೌಲಭ್ಯ ಹೊಂದಿದ್ದ ಬೈಕ್ ಅನ್ನು ಓಡಿಸಿದ್ದ ಅಮೀರ್ ಖಾನ್, ಬಜಾಜ್ ವಿ 15 ಖರೀದಿಸಲು ವಿಶೇಷವಾದ ಕಾರಣ ಒಂದಿದೆ. ಏನದು ಅಂತೀರಾ. ಮುಂದೆ ಓದಿ.

ಬಜಾಜ್ ವಿ 15 ಬೈಕ್ ಗೆ 1971 ರ ಭಾರತ- ಪಾಕಿಸ್ತಾನ ಯುದ್ದದ ಸಂದರ್ಭದಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ‘ಐಎನ್ಎಸ್ ವಿಕ್ರಾಂತ್’ ನ ಲೋಹವನ್ನು ಬಳಸಿಕೊಳ್ಳಲಾಗಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಈ ಬೈಕ್ ಖರೀದಿಸಲು ಅಮೀರ್ ಖಾನ್ ಆಸಕ್ತಿ ತೋರಿದ್ದರು.

ಇದು ಬಜಾಜ್ ಆಟೋ ಮ್ಯಾನೇಜಿಂಗ್ ಡೈರೆಕ್ಟರ್ ರಾಜೀವ್ ಬಜಾಜ್ ಅವರ ಕಿವಿ ಮುಟ್ಟಿತು. ಅಮೀರ್ ಖಾನ್ ಸ್ನೇಹಿತರೂ ಆಗಿರುವ ರಾಜೀವ್ ಬಜಾಜ್, ಅಮೀರ್ ಖಾನ್ ಬೈಕ್ ಗೆ ವಿಶೇಷ ವಿನ್ಯಾಸ ಮಾಡಿಸಿದ್ದಾರೆ. ಪೆಟ್ರೋಲ್ ಟ್ಯಾಂಕ್ ಮೇಲೆ ‘A’ ಎಂಬ ಅಕ್ಷರವಿದೆ. ಬಜಾಜ್ ಕಂಪನಿಯ ಪ್ರತಿನಿಧಿಗಳು ಖುದ್ದಾಗಿ ಅಮೀರ್ ಖಾನ್ ನಿವಾಸಕ್ಕೆ ತೆರಳಿ ಬೈಕ್ ತಲುಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...