alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಧವನ್ ಗೆ ‘3 ಈಡಿಯೆಟ್ಸ್’ ಶೈಲಿಯಲ್ಲಿ ವಿಶ್ ಮಾಡಿದ ಅಮೀರ್

3 idiotsಬಾಲಿವುಡ್ ನ ಯಶಸ್ವಿ ಚಿತ್ರ ‘3 ಈಡಿಯೆಟ್ಸ್’ ನ ಪ್ರಮುಖ ಪಾತ್ರಧಾರಿಗಳಲ್ಲಿ ಒಬ್ಬರಾಗಿದ್ದ ನಟ ಮಾಧವನ್ ಜೂನ್ 1 ರಂದು ತಮ್ಮ 46 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಟ ಅಮೀರ್ ಖಾನ್, ‘3 ಈಡಿಯೆಟ್ಸ್’ ಶೈಲಿಯಲ್ಲಿಯೇ ಮಾಧವನ್ ಗೆ ವಿಶ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ‘Maddy, my dearest Farhan, many happy returns of the day! Love. Rancho!’ ಎಂದು ಅಮೀರ್ ಖಾನ್ ಟ್ವೀಟ್ ಮಾಡಿದ್ದು, ಈ ಚಿತ್ರದಲ್ಲಿ ರ್ಯಾಂಚೋ ಪಾತ್ರದಲ್ಲಿ ಅಮೀರ್ ಕಾಣಿಸಿಕೊಂಡಿದ್ದರೆ, ಮಾಧವನ್, ಫರ್ಹಾನ್ ಪಾತ್ರ ನಿರ್ವಹಿಸಿದ್ದರು.

ರಾಜ್ ಕುಮಾರ್ ಹಿರಾನಿ ನಿರ್ದೇಶನದ, ವಿಧು ವಿನೋದ್ ಚೋಪ್ರಾ ನಿರ್ಮಾಣದ ‘3 ಈಡಿಯೆಟ್ಸ್’ ಚಿತ್ರ ಭರ್ಜರಿ ಯಶಸ್ಸು ಗಳಿಸಿತ್ತಲ್ಲದೇ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ಹುಳುಕುಗಳನ್ನು ಎತ್ತಿ ತೋರಿಸಿತ್ತು. ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಶರ್ಮಾನ್ ಜೋಷಿ ಕಾಣಿಸಿಕೊಂಡಿದ್ದು, ಕರೀನಾ ಕಪೂರ್ ನಾಯಕಿಯಾಗಿದ್ದರು. ಮಾಧವನ್ ಗೆ ವಿಶ್ ಮಾಡಲು ನಟ ಅಮೀರ್ ಖಾನ್ ‘3 ಈಡಿಯೆಟ್ಸ್’ ಚಿತ್ರದ ತಮ್ಮ ಪಾತ್ರಗಳ ಹೆಸರನ್ನೇ ಆಯ್ಕೆ ಮಾಡಿಕೊಂಡಿದ್ದು, ಈ ಚಿತ್ರ ಅಮೀರ್ ಖಾನ್ ಗೆ ಅಷ್ಟರ ಮಟ್ಟಿಗೆ ಆಪ್ತವಾಗಿತ್ತು ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...